ADVERTISEMENT

ಹರಿಹರ |ಮರಕ್ಕೆ ಬಸ್ ಡಿಕ್ಕಿ: 10ಕ್ಕೂ ಹೆಚ್ಚು ಜನರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 7:12 IST
Last Updated 19 ಜುಲೈ 2025, 7:12 IST
ಹರಿಹರ ಹೊರವಲಯದ ಹರಪನಹಳ್ಳಿ ಹೆದ್ದಾರಿಯಲ್ಲಿ ಮರಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾದ ಕೆಎಸ್‌ಆರ್‌ಟಿಸಿ ಬಸ್‌ನ ಚಾಲಕನನ್ನು  ಜನರು ರಕ್ಷಿಸಿದರು
ಹರಿಹರ ಹೊರವಲಯದ ಹರಪನಹಳ್ಳಿ ಹೆದ್ದಾರಿಯಲ್ಲಿ ಮರಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾದ ಕೆಎಸ್‌ಆರ್‌ಟಿಸಿ ಬಸ್‌ನ ಚಾಲಕನನ್ನು  ಜನರು ರಕ್ಷಿಸಿದರು   

ಹರಿಹರ: ಹೊರವಲಯದ ಹರಪನಹಳ್ಳಿ ಹೆದ್ದಾರಿಯ ಕರಲಹಳ್ಳಿ ಕ್ಯಾಂಪ್ ಬಳಿ ಮರಕ್ಕೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು 10ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ. 

ದಾವಣಗೆರೆ ಘಟಕಕ್ಕೆ ಸೇರಿದ ಬಸ್ ಬೆಳಿಗ್ಗೆ ಹರಿಹರದ ಮೂಲಕ ಹರಪನಹಳ್ಳಿ ಕಡೆಗೆ ಹೊರಟಿದೆ. ವೇಗವಾಗಿ ಸಾಗಿದ್ದ ಬಸ್ ಚಾಲಕನ ನಿಯಂತ್ರಣಕ್ಕೆ ಸಿಗದೇ ಹೆದ್ದಾರಿ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯಾದ ರಭಸಕ್ಕೆ ಬಸ್ಸಿನ ಮುಂಬಾಗ ಅಪ್ಪಚ್ಚಿಯಾಗಿದೆ. ಬಸ್‌ನಲ್ಲಿ ಸಿಲುಕಿದ್ದ ಚಾಲಕನನ್ನು ಹೊರಕ್ಕೆಳೆಯಲು ಜೆಸಿಬಿ ಸಹಾಯ ಪಡೆಯಬೇಕಾಯಿತು. 

ADVERTISEMENT

ಅಪಘಾತದ ವಿಷಯ ತಿಳಿದು ಸುತ್ತಲಿನ ಗ್ರಾಮಸ್ಥರು ಹಾಗೂ ರಸ್ತೆಯಲ್ಲಿ ಸಾಗುತ್ತಿದ್ದ ಜನರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿದರು. 

ಬಸ್ಸಿನಲ್ಲಿ 25 ಜನ ಪ್ರಯಾಣಿಕರಿದ್ದರು. ಚಾಲಕ ಮತ್ತು ನಿರ್ವಾಹಕ ಸೇರಿದಂತೆ ಕೆಲವು ಪ್ರಯಾಣಿಕರಿಗೆ ಕೈ, ಕಾಲು, ತಲೆಗೆ ತೀವ್ರ ಪೆಟ್ಟಾಗಿದೆ. ಉಳಿದವರಿಗೆ ಸಣ್ಣ, ಪುಟ್ಟ ಪೆಟ್ಟಾಗಿವೆ. 

ಗಾಯಾಳುಗಳು: ಚಾಲಕ ರವೀಂದ್ರ, ನಿರ್ವಾಹಕ ರಾಮಲಿಂಗಪ್ಪ ಕುಂಬಾರ್, ಪ್ರಯಾಣಿಕರಾದ ಅರುಣಪ್ಪ, ಚಂದ್ರನಾಯ್ಕ, ಮುಬಾರಕ್, ದಸ್ತಗೀರ್, ಲೋಕೇಶ್, ವಿನೂತಾ, ಸಮನ್ವಿತ ಸೇರಿದಂತೆ ಇನ್ನಿತರ ಪ್ರಯಾಣಿಕರು ಗಾಯಗೊಂಡಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹರಿಹರ: ಹರಿಹರ ಹೊರವಲಯದ ಹರನಹಳ್ಳಿ ಹೆದ್ದಾರಿಯಲ್ಲಿ ಶುಕ್ರವಾರ ಕೆಎಸ್‌ಆರ್‌ಟಿಸಿ ಬಸ್ಸೊಂದು ಮರಕ್ಕೆ ಡಿಕ್ಕಿಯಾಗಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.