ADVERTISEMENT

ಉಪಚುನಾವಣೆ: ಬಿಜೆಪಿಗೆ ಗೆಲುವು

ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರಗೊಂಡಿದ್ದ ಶ್ರೀನಿವಾಸ್‌–ದಂಪತಿಗೆ ಜಯ

​ಪ್ರಜಾವಾಣಿ ವಾರ್ತೆ
Published 23 ಮೇ 2022, 3:13 IST
Last Updated 23 ಮೇ 2022, 3:13 IST
ದಾವಣಗೆರೆಯಲ್ಲಿ ನಡೆದ ಮಹಾನಗರ ಪಾಲಿಕೆ ಉಪಚುನಾವಣೆಯಲ್ಲಿ ವಿಜೇತರಾದ ಬಿಜೆಪಿ ಅಭ್ಯರ್ಥಿ ಶ್ವೇತಾ ಶ್ರೀನಿವಾಸ್ ಸಂಭ್ರಮಿಸಿದರು –ಪ್ರಜಾವಾಣಿ ಚಿತ್ರ
ದಾವಣಗೆರೆಯಲ್ಲಿ ನಡೆದ ಮಹಾನಗರ ಪಾಲಿಕೆ ಉಪಚುನಾವಣೆಯಲ್ಲಿ ವಿಜೇತರಾದ ಬಿಜೆಪಿ ಅಭ್ಯರ್ಥಿ ಶ್ವೇತಾ ಶ್ರೀನಿವಾಸ್ ಸಂಭ್ರಮಿಸಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಮಹಾನಗರ ಪಾಲಿಕೆಯ ಎರಡು ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ನಗು ಬೀರಿದೆ. ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋಗಿದ್ದ ಶ್ರೀನಿವಾಸ್ ದಂಪತಿ ಗೆದ್ದು ಬಂದಿದ್ದಾರೆ.

28ನೇ ವಾರ್ಡ್ ಸದಸ್ಯ ಜೆ.ಎನ್. ಶ್ರೀನಿವಾಸ್, 37ನೇ ವಾರ್ಡ್ ಸದಸ್ಯೆ ಶ್ವೇತಾ ಎಸ್. ದಂಪತಿ ಕಾಂಗ್ರೆಸ್‌ಗೆ ರಾಜೀ ನಾಮೆ ನೀಡಿ ಬಿಜೆಪಿಗೆ ಸೇರಿದ್ದರಿಂದ ಉಪಚುನಾವಣೆ ನಡೆದಿತ್ತು. ಬಿಜೆಪಿಯಿಂದ ಇದೇ ದಂಪತಿ
ಕಣಕ್ಕಿಳಿದಿದ್ದರು. ಕಾಂಗ್ರೆಸ್‌ನಿಂದ 28ನೇ ವಾರ್ಡ್‌ನಲ್ಲಿ ಹುಲ್ಲುಮನಿ ಗಣೇಶ್‌ ಸ್ಪರ್ಧಿಸಿದ್ದರು. ಜತೆಗೆ ಜೆಡಿಎಸ್‌ ಸಹಿತ ಇತರ ನಾಲ್ವರು ಕಣದಲ್ಲಿ
ದ್ದರು. 37ನೇ ವಾರ್ಡ್‌ನಲ್ಲಿ ಶ್ವೇತಾ ಎಸ್‌. ವಿರುದ್ಧ ಕಾಂಗ್ರೆಸ್‌ನಿಂದ ಪ್ರಸಿದ್ಧ ಶಿಕ್ಷಣ ಸಂಸ್ಥೆ ಸಿದ್ಧಗಂಗಾದ ಸ್ಥಾಪಕರ ಸೊಸೆ ರೇಖಾರಾಣಿ ಕೆ.ಎಸ್‌. ಕಣಕ್ಕಿಳಿದಿದ್ದರು. ಎರಡೂ ಕಡೆಯೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಪಡೆದರು.

28ನೇ ವಾರ್ಡ್‌ನಲ್ಲಿ ಜೆ.ಎನ್. ಶ್ರಿನಿವಾಸ್ 2,565 ಮತ ಗಳಿಸಿದರೆ, ಕಾಂಗ್ರೆಸ್‌ನ ಹುಲ್ಲುಮನಿ ಗಣೇಶ್ 1,884 ಮತ ಪಡೆದರು. 681 ಮತಗಳಿಂದ ಶ್ರೀನಿವಾಸ್ ಜಯಗಳಿಸಿದರು. ಜೆಡಿಎಸ್‌ನಿಂದ ಸ್ಪರ್ಧಿಸಿ, ಬಳಿಕ ಕಾಂಗ್ರೆಸ್‌ ಸೇರಿದ್ದ ಮೊಹಮ್ಮದ್ ಸಮೀವುಲ್ಲಾ ಅವರಿಗೆ 16 ಮತಗಳು ಬಿದ್ದಿವೆ. ಕರ್ನಾಟಕ ರಾಷ್ಟ್ರ ಸಮಿತಿಯಿಂದ ಅಭಿಷೇಕ್‌
ಎನ್‌.ಎಸ್‌. 23 ಮತ, ಉತ್ತಮ ಪ್ರಜಾಕೀಯ ಪಕ್ಷದಿಂದ ಚಂದ್ರಶೇಖರ ಬಿ. 86 ಮತ, ಪಕ್ಷೇತರರಾಗಿ ಸ್ಪರ್ಧಿಸಿದ್ದ ಸೈಯದ್‌ ಮನ್ಸೂರ್‌ 60 ಮತಗಳನ್ನು ಪಡೆದರು. 12 ಮಂದಿ ನೋಟಾ ಚಲಾಯಿಸಿದ್ದಾರೆ.

ADVERTISEMENT

37ನೇ ವಾರ್ಡ್ ನಲ್ಲಿ ಶ್ವೇತಾ 2,096 ಮತ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ರೇಖಾರಾಣಿ ಕೆ.ಎಸ್‌. 1,303 ಮತ ಪಡೆದರು. ಶ್ವೇತಾ 793 ಮತಗಳಿಂದ ಜಯಗಳಿಸಿದರು. 24 ಮಂದಿ ನೋಟಾ ಚಲಾಯಿಸಿದ್ದಾರೆ.

ವಿಜಯೋತ್ಸವ: ಡಯೆಟ್‌ ಕಾಲೇಜಿನಲ್ಲಿ ಭಾನುವಾರ ಮತ ಎಣಿಕೆ ನಡೆಯಿತು. ಅರ್ಧ ಗಂಟೆಯಲ್ಲಿಯೇ ಫಲಿತಾಂಶ ಹೊರಬಿದ್ದಿತ್ತು. ಬೆಳಿಗ್ಗೆಯೇ ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರು ಹೈಸ್ಕೂಲ್‌ ಫೀಲ್ಡ್‌ನಲ್ಲಿ ನೆರೆದಿದ್ದರು. ಫಲಿತಾಂಶದ ಮಾಹಿತಿ ಬರುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಖುಷಿಯಲ್ಲಿ ಕೇಕೆ ಹಾಕಿದರೆ, ಕಾಂಗ್ರೆಸ್‌ನವರು ಮೈದಾನ ಬಿಟ್ಟು ತೆರಗಳಿದರು.

ಅಧಿಕೃತವಾಗಿ ಫಲಿತಾಂಶ ಘೋಷಣೆಯಾಗಿ ಪ್ರಮಾಣಪತ್ರ ಪಡೆದು ಶ್ರೀನಿವಾಸ್‌ ಮತ್ತು ಶ್ವೇತಾ ಹೊರಗೆ ಬಂದಾಗ ಸಂಭ್ರಮದಿಂದ ವಿಜಯೋತ್ಸವ ಆಚರಿಸಲಾಯಿತು. ಶ್ರೀನಿವಾಸ್‌ ಅವರನ್ನು ಹೆಗಲಮೇಲೆ ಕೂರಿಸಿ ಕುಣಿದರು. ಭಗತ್‌ಸಿಂಗ್‌ ನಗರ ಮತ್ತು ಕೆ.ಬಿ. ಕಾಲೊನಿಗಳಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ, ಕುಣಿದು ವಿಜಯೋತ್ಸವ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.