ADVERTISEMENT

ಸಿಇಟಿ: ವಿದ್ಯಾಸಾಗರ್‌ಗೆ 10ನೇ ರ‍್ಯಾಂಕ್

ಸಂಶೋಧನೆ ಮಾಡುವ ಆಸೆ ಇಂಗಿತ

​ಪ್ರಜಾವಾಣಿ ವಾರ್ತೆ
Published 25 ಮೇ 2019, 19:51 IST
Last Updated 25 ಮೇ 2019, 19:51 IST
ವಿದ್ಯಾಸಾಗರ್
ವಿದ್ಯಾಸಾಗರ್   

ದಾವಣಗೆರೆ: ವೃತ್ತಿ ಶಿಕ್ಷಣ ಕೋರ್ಸ್‌ಗಳ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ನಗರದ ಶ್ರೀ ವೈಷ್ಣವಿ ಚೇತನಾ ‍ಪದವಿಪೂರ್ವ ಕಾಲೇಜಿನ ವಿದ್ಯಾಸಾಗರ್‌ ಬಿವಿಎಸ್‌ಸಿ (ಬ್ಯಾಚುಲರ್‌ ಆಫ್‌ ವೆಟರ್ನರಿ ಸೈನ್ಸ್‌) ನ್ಯಾಚುರೋಪತಿಯಲ್ಲಿ 10ನೇ ರ‍್ಯಾಂಕ್ ಪಡೆದಿದ್ದಾರೆ.

ಇವರ ಜೊತೆಗೆ ಫನಿಪ್ರಿಯಾ ಟಿ, ಬಿಎಸ್‌ಸಿ ಅಗ್ರಿಯಲ್ಲಿ 49ನೇ ರ‍್ಯಾಂಕ್‌ ಹಾಗೂ ನ್ಯಾಚುರೋಪತಿಯಲ್ಲಿ 66ನೇ ರ‍್ಯಾಂಕ್‌, ಚಿರಂತ್ ಬಿವಿಎಸ್‌ಸಿಯಲ್ಲಿ 110ನೇ ರ‍್ಯಾಂಕ್‌ ಹಾಗೂ ಕೆ.ಎ. ಸ್ವಾತಿ ನ್ಯಾಚುರೋಪತಿಯಲ್ಲಿ 112ನೇ ರ‍್ಯಾಂಕ್‌ ಅನ್ನು ಗಳಿಸಿದ್ದಾರೆ. ವಿದ್ಯಾಸಾಗರ್ ದಾವಣಗೆರೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

‘ಪಿಯುಸಿ, ಜೆಇಇ, ನಾಟಾ ಹಾಗೂ ಸಿಇಟಿ ಪರೀಕ್ಷೆಗಳಲ್ಲಿ ಕಾಲೇಜು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ. ಪಿಯುಸಿಯಲ್ಲಿ 13 ವಿದ್ಯಾರ್ಥಿಗಳು 580ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. ಜೆಇಇ ಪರೀಕ್ಷೆಯಲ್ಲಿ ಜೆಇ ಮೇನ್ಸ್ ಪೇಪರ್ 1 ಅಲ್ಲಿ 218, 264 ಹಾಗೂ 669ನೇ ರ‍್ಯಾಂಕ್ ಪಡೆದಿದ್ದಾರೆ. ಪೇಪರ್–2ನಲ್ಲಿ ಆರ್ಕಿಟೆಕ್ಚರ್‌ನಲ್ಲಿ ಇಡಿ ಭಾರತದಲ್ಲಿ 31 ರ‍್ಯಾಂಕ್ ಪಡೆದಿದ್ದಾರೆ’ ಎಂದು ಚೇತನಾ ಟ್ರಸ್ಟ್‌ನ ನಿರ್ದೇಶಕ ಅನಿಲ್‌ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ನಾಟಾ’ದಲ್ಲಿ 13 ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದು, ದಾವಣಗೆರೆ ಜಿಲ್ಲೆಯಲ್ಲಿ ಪ್ರತಿಯೊಂದು ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಮುಂಬರುವ ನೀಟ್‌ ಪರೀಕ್ಷೆಯಲ್ಲೂ ಪ್ರಥಮ ಸ್ಥಾನ ಬರುವ ವಿಶ್ವಾಸ ಇದೆ. ಐಐಎಸ್‌ಸಿ (ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌) ನಡೆಸುವ ಕೆವಿಪಿವೈ ಪರೀಕ್ಷೆಯಲ್ಲಿ ಇಬ್ಬರು ವಿದ್ಯಾರ್ಥಿಗಳು 7 ಹಾಗೂ 423ನೇ ರ‍್ಯಾಂಕ್‌ ಪಡೆದಿದ್ದಾರೆ’ ಎಂದು ಹೇಳಿದರು.

ಟ್ರಸ್ಟ್‌ನ ಕಾರ್ಯದರ್ಶಿ ರಾಘವೇಂದ್ರ ಪ್ರಸಾದ್‌, ಉಪಪ್ರಾಂಶುಪಾಲ ವಿನೋದ್‌, ವ್ಯವಸ್ಥಾಪಕ ರಾಮಕೃಷ್ಣ, ಅಧೀಕ್ಷಕ ಪ್ರಭುದೇವ್‌ ಹಾಗೂ ಕೆ.ಜಿ. ಯಲ್ಲಪ್ಪ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.