ADVERTISEMENT

ನೆರೆ ಸಂತ್ರಸ್ತರಿಗೆ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳಿಂದ ದೇಣಿಗೆ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2019, 8:59 IST
Last Updated 10 ಸೆಪ್ಟೆಂಬರ್ 2019, 8:59 IST
   

ದಾವಣಗೆರೆ: ನೆರೆ ಸಂತ್ರಸ್ತರಿಗಾಗಿ ಇಲ್ಲಿನ ಶ್ರೀಶೈಲ ಮಠದಿಂದ ನಗರದ ವ್ಯಾಪಾರಿಗಳು ಹಾಗೂ ನಾಗರಿಕರಿಂದ ದೇಣಿಗೆ ಸಂಗ್ರಹಿಸಲಾಯಿತು.

ಶ್ರೀಶೈಲ ಮಠದ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿ ಮಾತನಾಡಿ, 'ಮೂರು ದಿವಸ ನಡೆಯಬೇಕಿದ್ದ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ 33ನೇ ಪುಣ್ಯಾರಾಧನೆ ಹಾಗೂ ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ 8ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮಗಳನ್ನು ಒಂದು ದಿವಸಕ್ಕೆ ಮೊಟಕುಗೊಳಿಸಿ ಅದರಿಂದ ಉಳಿತಾಯವಾದ ಖರ್ಚಿನ ಹಣವನ್ನು ನೆರೆ ಸಂತ್ರಸ್ತರ ಪರಿಹಾರ ಯೋಜನೆಗೆ ಸಮರ್ಪಿಸಲಾಗುವುದು' ಎಂದು ಹೇಳಿದರು.

ಆವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಮಾತನಾಡಿ, 'ಪ್ರತಿ ವರ್ಷ ಜೋಳಿಗೆಯಿಂದ ಬಂದ ಹಣವನ್ನು ಸತ್ಕಾರ್ಯಗಳಿಗೆ ಬಳಸಲಾಗುತ್ತಿದ್ದು, ಆದರೆ ಈ ವರ್ಷ ನೆರೆ ಸಂತ್ರಸ್ತರು ಸಂಕಷ್ಟದಲ್ಲಿದ್ದು, ಅವರಿಗೆ ಸಹಾಯ ಮಾಡುವ ಮೂಲಕ ಸಮಾಜಮುಖಿ ಕಾರ್ಯವನ್ನು ಮಾಡುತ್ತಿದೆ' ಎಂದರು.

ADVERTISEMENT

ವಟುಗಳು ನಗರದ ಪಿ.ಬಿ. ರಸ್ತೆಯಲ್ಲಿ ಸಂಚರಿಸಿ ಹೋಟೆಲ್‌ಗಳು, ಅಂಗಡಿಗಳು, ಆಟೊಮೊಬೈಲ್ ಗಳ ಮಾಲೀಕರು ಹಾಗೂ ಜನರಿಂದ ಹಣ, ದವಸ ಧಾನ್ಯ ಸಂಗ್ರಹಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.