
ಚನ್ನಗಿರಿ: ‘ಕೊಡುಗೈ ದಾನಿ, ವಿದ್ಯಾಕಾಶಿ ನಿರ್ಮಾತೃ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಸಾವು ವೀರಶೈವ ಮಹಾಸಭಾಕ್ಕೆ ತುಂಬಲಾಗದ ನಷ್ಟವುಂಟು ಮಾಡಿದೆ’ ಎಂದು ಜಿಲ್ಲಾ ಜನ ಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಎಂ.ಬಿ. ನಾಗರಾಜ್ ಕಾಕನೂರು ತಿಳಿಸಿದರು.
ಪಟ್ಟಣದ ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕದ ಕಚೇರಿಯಲ್ಲಿ ಸೋಮವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
‘ಜಿಲ್ಲೆಯ ಸಹಸ್ರಾರು ನಿರುದ್ಯೋಗಿಗಳಿಗೆ ಉದ್ಯೋಗ ನೀಡಿದ ಉದ್ಯೋಗದಾತ, ದಾನ ಕೇಳಿದವರಿಗೆ ನಿರಾಶೆ ಮಾಡದೇ ಕೈತುಂಬ ದಾನ ನೀಡಿದ ದಾನವೀರ, ನೇರ ನಡೆ– ನುಡಿಯ ವ್ಯಕ್ತಿತ್ವವನ್ನು ಹೊಂದಿ, ಎಲ್ಲ ಪಕ್ಷದವರ ಜತೆಗೂ ಉತ್ತಮ ಬಾಂಧವ್ಯ ಇಟ್ಟುಕೊಂಡ ಅಪರೂಪದ ರಾಜಕಾರಣಿ, 6 ಬಾರಿ ಶಾಸಕರಾಗಿ ಹಾಗೂ ಒಂದು ಬಾರಿ ಸಂಸದರಾಗಿ ಆಯ್ಕೆಯಾದ ಶಾಮನೂರು ಶಿವಶಂಕರಪ್ಪ ಅವರ ಸಾವು ಇಡೀ ಜಿಲ್ಲೆಗೆ ತುಂಬಲಾಗದ ನಷ್ಟವುಂಟು ಮಾಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗುವಂತಾಗಲಿ’ ಎಂದರು.
ವೀರಶೈವ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಹರೋಸಾಗರ್ ಪ್ರಕಾಶ್, ಕಾರ್ಯದರ್ಶಿ ಎಸ್.ಜೆ. ಕಿರಣ್, ಉಪಾಧ್ಯಕ್ಷ ಬಿ. ರೇವಣಸಿದ್ದಪ್ಪ, ಪ್ರಭು, ಜಗದೀಶ್, ಜವಳಿ ಮಹೇಶ್, ದಿಬ್ಬದಹಳ್ಳಿ ದಿನೇಶ್,ಪುಷ್ಪ ವಾಮದೇವಪ್ಪ, ಶಶಿಕಲಾ ಕಿರಣ್, ಮಹಾದೇವಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.