ಚನ್ನಗಿರಿ: ‘ಪರಿಸರ ನಾಶದಿಂದ ಕಾಲ ಕಾಲಕ್ಕೆ ಮಳೆಯಾಗದೇ ರೈತರು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಪರಿಸರ ಸಂರಕ್ಷಣೆಗಾಗಿ ಕಾಂಗ್ರೆಸ್ ವಿದ್ಯಾರ್ಥಿ ಘಟಕದಿಂದ ಕ್ಷೇತ್ರದ ಎಲ್ಲೆಡೆ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ತಿಳಿಸಿದರು.
ಪಟ್ಟಣದಲ್ಲಿ ಎನ್ಎಸ್‌ಯುಐನಿಂದ ಬುಧವಾರ ಹಮ್ಮಿಕೊಂಡಿದ್ದ ಮನೆಗೊಂದು ಮರ, ಊರಿಗೊಂದು ವನ ಅಭಿಯಾನದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪಟ್ಟಣದಲ್ಲಿ 100ಕ್ಕೂ ಹೆಚ್ಚು ಮನೆಗಳಿಗೆ ಸಸಿಗಳನ್ನು ವಿತರಿಸಲಾಗಿದೆ. ಶಾಲಾ ಆವರಣ, ಸರ್ಕಾರಿ ಕಚೇರಿ, ರಸ್ತೆ ಬದಿ ಮುಂತಾದ ಕಡೆಗಳಲ್ಲಿ ಸಸಿ ನೆಡಲಾಗುವುದು. ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿಯೂ ಈ ಅಭಿಯಾನದ ಅಡಿಯಲ್ಲಿ ಸಸಿಗಳನ್ನು ನೆಡಲಾಗುವುದು’ ಎಂದು ತಿಳಿಸಿದರು.
ಎನ್ಎಸ್‌ಯುಐ ರಾಜ್ಯ ಘಟಕದ ಕಾರ್ಯದರ್ಶಿ ಮುಬಷೀರ್ ಅಹಮದ್, ಅನೂಪ್ ಸ್ವಾಮಿ, ಜಫ್ರುಲ್ಲ ಖಾನ್, ಸುಲ್ತಾನ್, ರಾಹುಲ್, ಇಬ್ರಾಹಿಂ, ಶಿವಕುಮಾರ್, ರಫೀಉಲ್ಲಾ, ಪ್ರವೀಣ್, ಮುರುಳಿ, ಪ್ರಜ್ವಲ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.