
ಚನ್ನಗಿರಿ: ಭದ್ರಾವತಿಯಲ್ಲಿ ಜ. 24ರಿಂದ ಪ್ರಾರಂಭವಾಗಲಿರುವ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ತೆರಳುತ್ತಿದ್ದ ಸಿರಿಗೆರೆ ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಚನ್ನಗಿರಿ ಪಟ್ಟಣಕ್ಕೆ ಆಗಮಿಸಿದಾಗ ಶಾಸಕ ಬಸವರಾಜು ವಿ. ಶಿವಗಂಗಾ ಶನಿವಾರ ಭವ್ಯ ಸ್ವಾಗತವನ್ನು ಕೋರಿದರು.
300ಕ್ಕೂ ಹೆಚ್ಚು ಕಾರುಗಳು ಹಾಗೂ ನೂರಾರು ಬೈಕ್‌ಗಳ ಮೆರವಣಿಗೆಯ ಮೂಲಕ ಚನ್ನಗಿರಿ ಪಟ್ಟಣದಿಂದ ಭದ್ರಾವತಿ ನಗರಕ್ಕೆ ಹೋಗಲು ಬೀಳ್ಕೋಟ್ಟರು.
ಇನ್ನು ಸ್ವಾಮೀಜಿಗಳು ಆಗಮಿಸಿದ ಕಾಕನೂರು, ನುಗ್ಗಿಹಳ್ಳಿ, ದೇವರಹಳ್ಳಿ, ಹಿರೇಉಡ, ಹಟ್ಟಿ, ಆಕಳಕಟ್ಟೆ, ಬುಸ್ಸೇನಹಳ್ಳಿ, ಮುದ್ದೇನಹಳ್ಳಿ, ಅಜ್ಜಿಹಳ್ಳಿ, ಸುಣಿಗೆರೆ, ಮಾವಿನಕಟ್ಟೆ ಮುಂತಾದ ಗ್ರಾಮಗಳಲ್ಲಿ ರಸ್ತೆಯುದ್ಧಕ್ಕೂ ಜನರು ನಿಂತು ಸ್ವಾಮೀಜಿಗಳಿಗೆ ಸ್ವಾಗತವನ್ನು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.