ಬಸವಾಪಟ್ಟಣ: ಸಮೀಪದ ಚಿನ್ಮೂಲಾದ್ರಿ ಬೆಟ್ಟ ಶ್ರೇಣಿಯಲ್ಲಿರುವ ಚಿಕ್ಕುಡದಮ್ಮನ ಶ್ರಾವಣ ಮಾಸದ ವಾರ್ಷಿಕೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.
ಉತ್ಸವದ ಅಂಗವಾಗಿ ಸೋಮವಾರ ರಾತ್ರಿ ದೇವಿಪುರಾಣ, ಮಂಗಳವಾರ ಮುಂಜಾನೆ ಪಂಚಾಮೃತ ಅಭಿಷೇಕ, ಅಷ್ಟೋತ್ತರದ ನಂತರ ಅಲಂಕಾರ, ಚಂಡಿಕಾ ಹೋಮ, ಪೂರ್ಣಾಹುತಿ ನಂತರ ಮಹಾಮಂಗಳಾರತಿ ನೆರವೇರಿತು.
ಮಹಿಳೆಯರು ದೇವಿಗೆ ಉಡಿ ತುಂಬಿ ಬಾಗಿನ ಅರ್ಪಿಸಿದರು. ನಂತರ ದಾಗಿನಕಟ್ಟೆಯ ಚಿಕ್ಕುಡದಮ್ಮ ಸೇವಾಸಮಿತಿಯಿಂದ ಅನ್ನ ಸಂತರ್ಪಣೆ ನಡೆಯಿತು. ಪಾದಯಾತ್ರೆಯಲ್ಲೂ ಭಕ್ತರು ಬಂದಿದ್ದರು. ಭಕ್ತರಿಂದ ಇಡೀಬೆಟ್ಟ ಕಂಗೊಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.