ADVERTISEMENT

ಕುಂಬಳೂರು: ಗ್ರಾಮೀಣ ಪ್ರದೇಶದ ಹೈಟೆಕ್ ‘ಚಿಟ್ಟಕ್ಕಿ ಇಂಟರ್ ನ್ಯಾಷನಲ್‘ ಸ್ಕೂಲ್ ಆರಂಭ  

​ಪ್ರಜಾವಾಣಿ ವಾರ್ತೆ
Published 13 ಮೇ 2023, 13:14 IST
Last Updated 13 ಮೇ 2023, 13:14 IST
ಚಿಟ್ಟಕ್ಕಿ ಇಂಟರ್ ನ್ಯಾಷನಲ್ ಸ್ಕೂಲ್ ಚಿತ್ರ
ಚಿಟ್ಟಕ್ಕಿ ಇಂಟರ್ ನ್ಯಾಷನಲ್ ಸ್ಕೂಲ್ ಚಿತ್ರ   

ಮಲೇಬೆನ್ನೂರು: ಸಮೀಪದ ಕುಂಬಳೂರು ಗ್ರಾಮದ ಹೊರವಲಯದಲ್ಲಿ ನೂತನವಾಗಿ ನಿರ್ಮಿಸಿರುವ ‘ಚಿಟ್ಟಕ್ಕಿ ಇಂಟರ್ ನ್ಯಾಷನಲ್ ಸ್ಕೂಲ್’ ಮೇ 14 ರಂದು ಲೋಕಾರ್ಪಣೆಯಾಗಲಿದೆ.

ಗ್ರಾಮೀಣ ಪ್ರದೇಶದ ರೈತರು ಹಾಗೂ ಮಧ್ಯಮ ವರ್ಗದ ಹೆಚ್ಚಿನ ಮಕ್ಕಳು ಶಿಕ್ಷಣ ಪಡೆಯಲು ನಗರ ಪ್ರದೇಶಕ್ಕೆ ಹೋಗುವುದನ್ನು ತಪ್ಪಿಸುವುದು, ಕಡಿಮೆ ವೆಚ್ಚದಲ್ಲಿ ಗುಣಾತ್ಮಕ ಶಿಕ್ಷಣ ನೀಡುವುದು ಮುಖ್ಯ ಉದ್ದೇಶ. ಎಲ್‌ಕೆಜಿಯಿಂದ 7ನೇ ತರಗತಿಯವರೆಗೆ ಬೋಧಿಸಲಾಗುವುದು ಎನ್ನುತ್ತಾರೆ ಸಂಸ್ಥೆ ಸ್ಥಾಪಕ ಅಧ್ಯಕ್ಷ ರಮೇಶ್ ಬಿ. ಚಿಟ್ಟಕ್ಕಿ.

ರಾಜ್ಯ ಹೆದ್ದಾರಿ-25ಕ್ಕೆ ಹೊಂದಿಕೊಂಡಿರುವ 4 ಎಕರೆ ಪ್ರದೇಶದಲ್ಲಿ ನೆಲ ಮಹಡಿ ಸೇರಿ 3 ಮಹಡಿಯ ಬೃಹತ್ ಕಟ್ಟಡದಲ್ಲಿ ಸುಸಜ್ಜಿತ 48 ಕೊಠಡಿಗಳಿವೆ. ಸಭಾಂಗಣ, ಆಧುನಿಕ ಶೌಚಾಲಯದೊಂದಿಗೆ ಡಿಜಿಟಲ್ ಬೋಧನಾ ವ್ಯವಸ್ಥೆ, ಆಧುನಿಕ ಪ್ರಯೋಗಾಲಯ, ಪೀಠೋಪಕರಣ, ಕ್ರೀಡಾಂಗಣ, ಪಾರ್ಕ್, ಸಿ.ಸಿ.ಟಿ.ವಿ ಕ್ಯಾಮೆರಾ ವ್ಯವಸ್ಥೆಯೊಂದಿಗೆ ನಿರ್ಮಿಸಲಾಗಿದೆ.

ADVERTISEMENT

ಖ್ಯಾತ ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ ಮಾರ್ಗದರ್ಶನದಲ್ಲಿ ‘ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್’ನ ನುರಿತ ಬೋಧಕರಿಂದ ಶಿಕ್ಷಣ ನೀಡಲಾಗುವುದು.

ಶಾಲಾ ಶಿಕ್ಷಣದೊಂದಿಗೆ ಕ್ರೀಡೆ, ವಿಶೇಷ ತರಗತಿ, ಯೋಗ, ಸಾಂಸ್ಕೃತಿಕ ಚಟುವಟಿಕೆ, ಸಂಗೀತ, ಅಬ್ಯಾಕಸ್, ವೇದ ವಿಜ್ಞಾನ ಕಲಿಕೆಯ ಜೊತೆಗೆ ಮಕ್ಕಳಿಗೆ ವಾಹನ ಸೌಲಭ್ಯ ಒದಗಿಸಲಾಗಿದೆ.

ಎಸ್‌ಡಿಎಲ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಮಹಾಂತೇಶ್ ಎನ್‌.ಸಿ., ಮುಖ್ಯ ಶಿಕ್ಷಕ ಕುಮಾರ್ ಎಸ್.ಕೆ., ಕಾರ್ಯದರ್ಶಿ ಚೈತ್ರಾ ಮಹಾಂತೇಶ್ ಎನ್ .ಸಿ. ಆಡಳಿತಾಧಿಕಾರಿ ಮಮತಾ ಕುಮಾರ್. ಎಸ್.ಕೆ. ವಿನ್ಯಾಸಗಾರ ಸತೀಶ್ ಹಿಂದೆರ್, ನಂದಿ ಕಟ್ಟಡ ನಿರ್ಮಾಣ ಸಂಸ್ಥೆಯ ಬಿಸ್ಲೇರಿ ಗಂಗಣ್ಣ, ಕರ್ಣಾಟಕ ಬ್ಯಾಂಕ್ ಸಹಕಾರ ಸ್ಮರಿಸಿದರು. ಪ್ರವೇಶಾತಿಗೆ ದೂ: 9916619087, 97439 95172 ಸಂಪರ್ಕಿಸಬಹುದು.

ಕಾರ್ಯಕ್ರಮ:

ನೇತೃತ್ವ: ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ಅಧ್ಯಕ್ಷತೆ : ಬಸವರಾಜ್ ಎಸ್. ಚಿಟ್ಟಕ್ಕಿ,

ಮುಖ್ಯ ಅತಿಥಿಗಳು: ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ,

ಡಿಸಿ ಶಿವಾನಂದ ಕಾಪಶಿ, ಎಸ್‌ಪಿ ಡಾ. ಅರುಣ್, ಹಯವದನ ಉಪಾಧ್ಯಾಯ, ಕರ್ಣಾಟಕ ಬ್ಯಾಂಕ್ ಎಜಿಎಂ. ತಿಪ್ಪೇಶಪ್ಪ ಡಿಡಿಪಿಐ, ಎಂ. ಹನುಮಂತಪ್ಪ , ಬಿಇಒ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.