ADVERTISEMENT

ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ: ಮಾಯಕೊಂಡದಲ್ಲಿ ಕಾಂಗ್ರೆಸ್‌ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2022, 5:17 IST
Last Updated 12 ಆಗಸ್ಟ್ 2022, 5:17 IST
ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಅಣಜಿಯ ಎಂ.ಸಿ. ವಿರೂಪಾಕ್ಷಪ್ಪ ಮತ್ತು ಎ.ಎಂ. ಸಿದ್ದಯ್ಯ ಅವರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಾದಯಾತ್ರೆ ಆರಂಭಿಸಲಾಯಿತು.
ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಅಣಜಿಯ ಎಂ.ಸಿ. ವಿರೂಪಾಕ್ಷಪ್ಪ ಮತ್ತು ಎ.ಎಂ. ಸಿದ್ದಯ್ಯ ಅವರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಾದಯಾತ್ರೆ ಆರಂಭಿಸಲಾಯಿತು.   

ದಾವಣಗೆರೆ: ಸ್ವಾತಂತ್ರ್ಯೋತ್ಸವದ ಅಮೃತ್ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಮಾಯಕೊಂಡ ಕ್ಷೇತ್ರದ ಅಣಜಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಆನಗೋಡು ಜಿಲ್ಲಾ ಪಂಚಾಯಿತಿ ಕ್ಷೇತ್ರದ ವರೆಗೆ ಬೃಹತ್ ಪಾದಯಾತ್ರೆ ನಡೆಯಿತು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಎಸ್. ಬಸವಂತಪ್ಪ ಮಾತನಾಡಿ, ‘ಅಣಜಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಫಲವತ್ತಾದ ಭೂಮಿಯಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ್ ಮಹೋತ್ಸವದ ಸಂದರ್ಭದಲ್ಲಿ ಕೈಗಾರಿಕಾ ಕಾರಿಡಾರ್ ನಿರ್ಮಿಸಲು ಮುಂದಾಗಿ ರೈತರನ್ನು ಬೀದಿಪಾಲು ಮಾಡಲು ಬಿಜೆಪಿ ಸರ್ಕಾರ ಮುಂದಾಗಿದೆ. ಕೃಷಿ ಜಮೀನುಗಳಿಂದ ಬದುಕು ಕಟ್ಟಿಕೊಂಡಿರುವ ಈ ಭಾಗದ ರೈತರ ಮೇಲೆ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ’ ಎಂದು ಆರೋಪಿಸಿದರು.

ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ ಬಲಿದಾನಗೈದವರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ. ಹನುಮಂತಪ್ಪ, ಮುಖಂಡರಾದ ಡಾ. ವೈ. ರಾಮಪ್ಪ, ಎಸ್.ಕೆ. ಚಂದ್ರಶೇಖರ್, ಮಲ್ಲಪ್ಪಗೌಡ್ರು, ಆನಂದಪ್ಪ, ಡಿ. ಬಸವರಾಜ್, ಮೆಳ್ಳೇಕಟ್ಟೆ ಹನುಮಂತಪ್ಪ, ಅಣಜಿ ರಾಜಪ್ಪ ಮತ್ತಿತರರು ಸ್ಮರಿಸಿಕೊಂಡರು.

ADVERTISEMENT

ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಅಣಜಿಯ ಎಂ.ಸಿ. ವಿರೂಪಾಕ್ಷಪ್ಪ ಮತ್ತು ಎ.ಎಂ. ಸಿದ್ದಯ್ಯ ಅವರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿ ಪಾದಯಾತ್ರೆ ಆರಂಭಿಸಲಾಯಿತು.

ಮುಖಂಡರಾದ ಸವಿತಾ ಬಾಯಿ ಮಾಲ್ತೇಶ್‌, ಆನಗೋಡು ಕರಿಬಸಪ್ಪ, ಬಸವರಾಜ್, ಪ್ರಕಾಶ್ ಪಾಟೀಲ್, ಕೊಟ್ರೇಶ್‌ನಾಯ್ಕ, ಚಂದ್ರಪ್ಪ, ಮುರುಗೇಶಪ್ಪ, ಸುಭಾಷ್‌ಗೌಡ್ರು, ಸಿದ್ದೇಶ್, ಕಿರಣ್, ಹಾಲೇಶಿ, ಹನುಮಂತಪ್ಪ, ಕಂದನಕೋವಿ ಕೆಂಚವೀರಪ್ಪ, ದೇವೇಂದ್ರಪ್ಪ, ರಾಮಗೊಂಡನಹಳ್ಳಿ ಶರಣಪ್ಪ, ಹುಣಸೇಕಟ್ಟೆ ಬಸವರಾಜಪ್ಪ, ನೀರ್ಥಡಿ ಸುರೇಶ್‌ಗೌಡ್ರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.