ದಾವಣಗೆರೆ: ಇಂಧನ ಬೆಲೆ ಹಾಗೂ ಗ್ಯಾಸ್ ಸಿಲಿಂಡರ್ ದರ ಏರಿಕೆ ಖಂಡಿಸಿ ಕಾಂಗ್ರೆಸ್‌ವತಿಯಿಂದ ಐದು ದಿವಸ ತಾಲ್ಲೂಕು, ಗ್ರಾಮೀಣ ಭಾಗಗಳಲ್ಲಿ ನಿರಂತರವಾಗಿ ಧರಣಿ ಹಮ್ಮಿಕೊಳ್ಳಲಾಗುವುದು ಕಾಂಗ್ರೆಸ್ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ. ಮಂಜಪ್ಪ ಹೇಳಿದರು.
‘ಪಕ್ಷದ ಮಹಿಳಾ, ಕಾರ್ಮಿಕ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಯುವ ಕಾಂಗ್ರೆಸ್ ಸೇರಿ ಎಲ್ಲ ಘಟಕಗಳಿಂದನಗರದ ಎಲ್ಲಾ ಪೆಟ್ರೋಲ್ ಬಂಕ್‌ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಗಿದೆ. ಜೂನ್ 12ರಂದು ತಾಲ್ಲೂಕು, 13ರಂದು ಹೋಬಳಿ, 14ರಂದು ಗ್ರಾಮ ಪಂಚಾಯಿತಿ ಮಟ್ಟದ ಪೆಟ್ರೋಲ್ ಬಂಕ್‌ಗಳ ಮುಂದೆ ಹಾಗೂ 15ರಂದು ಉಳಿದ ಭಾಗಗಳಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಬೆಲೆ ನಿಯಂತ್ರಣ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದಪ್ರಧಾನಿನರೇಂದ್ರ ಮೊದಿಯವರು ದೇಶದ ಜನರನ್ನು ವಂಚಿಸಿದ್ದಾರೆ. ಪೆಟ್ರೊಲ್ ಬೆಲೆ ₹100ರ ಗಡಿದಾಟಿದೆ. ಡಿಸೇಲ್, ಅಡುಗೆ ಅನಿಲ ದರ ಗಗನಕ್ಕೇರಿದೆ. ನಿರಂತರ ಬೆಲೆ ಏರಿಕೆಯಿಂದಾಗಿ ರೈತರು ಹಾಗೂ ಬಡವರು ಜೀವನ ನಡೆಸುವುದು ಕಷ್ಟವಾಗಿದೆ’ ಎಂದು ಆರೋಪಿಸಿದರು.
‘ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ಹಿಂಪಡೆದರೆ ಜನರಿಗೆ ಕೊಂಚಮಟ್ಟಿಗೆ ಹೊರೆ ಕಡಿಮೆಯಾಗುತ್ತದೆ. ವಿರೋಧ ಪಕ್ಷಗಳ ಮೇಲೆ ಗೂಬೆ ಕೂರಿಸುವುದರ ಬದಲು ಚುನಾವಣೆ ವೇಳೆ ನೀಡಿದಭರವಸೆಯಂತೆ ಸರ್ಕಾರಗಳು ಬೆಲೆ ಇಳಿಕೆಗೆ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್ ಮಾತನಾಡಿ, ‘ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಲಸಿಕೆ ನೀಡುವಲ್ಲಿ
ತಾರತಮ್ಯ ಮಾಡಲಾಗುತ್ತಿದೆ. ಬಡವರು ಮಧ್ಯಮ ವರ್ಗದವರು ಹೆಚ್ಚಾಗಿವಾಸಿಸುವ ವಾರ್ಡ್‌ಗಳಲ್ಲಿ ಕಡಿಮೆ ಪ್ರಮಾಣದ ಲಸಿಕೆ ನೀಡಲಾಗುತ್ತಿದೆ. ದಿನಕ್ಕೆ 10 ಸಾವಿರ ಡೋಸ್ ಲಸಿಕೆಗಳು ಬರುತ್ತಿದ್ದು, ಇದು ಸಾಲುತ್ತಿಲ್ಲ. ಪ್ರತಿನಿತ್ಯ 20 ಸಾವಿರ ಡೋಸ್ ಬಂದರೆ ಎಲ್ಲಾ ವಾರ್ಡ್‌ಗಳಲ್ಲಿ ಸಮರ್ಪಕವಾಗಿ ವಿತರಣೆ ಮಾಡಬಹುದು. ಇಲ್ಲದಿದ್ದರೆಲಸಿಕೆಗಾಗಿ ವರ್ಷಗಳೇ
ಕಾಯಬೇಕಾಗಿದೆ ಎಂದು ಟೀಕಿಸಿದರು.
ಮುನಿಯಪ್ಪ ಭೇಟಿ
ಜಿಲ್ಲಾ ವೀಕ್ಷಕರಾಗಿ ನೇಮಕಗೊಂಡಿರುವ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಅವರು ಆನಗೋಡು, ಹರಿಹರ, ದಾವಣಗೆರೆ ಮುಂತಾದ ಭಾಗಗಳಿಗೆ ಭೇಟಿ ನೀಡುವರು ಎಂದು ಮಂಜಪ್ಪ ತಿಳಿಸಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್. ಬಸವಂತಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಅನಿತಾಬಾಯಿ ಮಾಲತೇಶ್, ಆಶಾ ಮುರುಳಿ, ಸುಷ್ಮಾ ಪಾಟೀಲ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.