ADVERTISEMENT

ಹೊನ್ನಾಳಿ: ಅಡಿಕೆ, ಬಾಳೆ ಬೆಳೆಗೆ ಬೆಂಕಿ; ನಷ್ಟ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 4:46 IST
Last Updated 1 ಫೆಬ್ರುವರಿ 2026, 4:46 IST
 ಹೊನ್ನಾಳಿ ತಾ ಎಚ್. ಗೋಪಗೊಂಡನಹಳ್ಳಿಯಲ್ಲಿ ಬೆಳೆಯಲಾಗಿದ್ದ 50ಕ್ಕೂ ಹೆಚ್ಚು ಅಡಿಕೆ ಹಾಗೂ ಬಾಳೆಗಿಡ ಬೆಂಕಿಗೆ ಆಹುತಿಯಾಗಿರುವುದು 
 ಹೊನ್ನಾಳಿ ತಾ ಎಚ್. ಗೋಪಗೊಂಡನಹಳ್ಳಿಯಲ್ಲಿ ಬೆಳೆಯಲಾಗಿದ್ದ 50ಕ್ಕೂ ಹೆಚ್ಚು ಅಡಿಕೆ ಹಾಗೂ ಬಾಳೆಗಿಡ ಬೆಂಕಿಗೆ ಆಹುತಿಯಾಗಿರುವುದು    

ಹೊನ್ನಾಳಿ: ತಾಲ್ಲೂಕಿನ ಎಚ್. ಗೋಪಗೊಂಡನಹಳ್ಳಿ ತಾಂಡದ ಗಿರಿಜಾಬಾಯಿ ರುದ್ರನಾಯ್ಕ ಅವರಿಗೆ ಸೇರಿದ ಅಡಿಕೆ ಹಾಗೂ ಬಾಳೆ ಬೆಳೆಗೆ  ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎಂದು ನಾಗರಾಜ್‍ನಾಯ್ಕ ಅವರು ಶನಿವಾರ ಮಾಹಿತಿ ನೀಡಿದ್ದಾರೆ.

ಗ್ರಾಮದ ಸರ್ವೇ ನಂ. 112/14ರಲ್ಲಿರುವ ಜಮೀನಿನಲ್ಲಿ ಅಡಿಕೆ ಹಾಗೂ ಬಾಳೆಯನ್ನು ಹಾಕಲಾಗಿತ್ತು. 2 ವರ್ಷದ ಅಡಿಕೆ ಗಿಡಗಳು ಹಾಗೂ ಕಟಾವಿಗೆ ಬಂದಿದ್ದ ಬಾಳೆ ಬೆಳೆ ನಾಶವಾಗಿದೆ. ಜೊತೆಗೆ ತೋಟದಲ್ಲಿದ್ದ ಡ್ರಿಪ್ ಹಾಗೂ ಪೈಪ್‌ಗಳು ಬೆಂಕಿಗೆ ಆಹುತಿಯಾಗಿವೆ ಎಂದು ಅಳಲು ತೋಡಿಕೊಂಡರು.

ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗುವುದು. ಸಂಬಂಧಪಟ್ಟ ಅಧಿಕಾರಿಗಳು ತೋಟಕ್ಕೆ ಭೇಟಿ ನೀಡಿ ಪರಿಶೀಲಿಸಿ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.

ADVERTISEMENT

ಗೋಪಗೊಂಡನಹಳ್ಳಿ ಸರ್ವೇ ನಂ 112/14 ರಲ್ಲಿ ಬೆಳೆಯಲಾಗಿದ್ದ 50 ಕ್ಕೂ ಹೆಚ್ಚು ಅಡಿಕೆ ಹಾಗೂ ಬಾಳೆಗಿಡ ಬೆಂಕಿಗೆ ಆಹುತಿಯಾಗಿರುವುದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.