ADVERTISEMENT

ಬೆಳೆ ವಿಮೆ: ನೋಂದಣಿಗೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 12 ಜುಲೈ 2023, 14:44 IST
Last Updated 12 ಜುಲೈ 2023, 14:44 IST

ಹರಿಹರ: ತೋಟಗಾರಿಕೆ ಬೆಳೆಗಳಿಗೆ 2023-24ನೇ ಸಾಲಿನ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಮುಂಗಾರು ಹಂಗಾಮಿನ ಅವಧಿಗೆ ವಿಮಾ ಯೋಜನೆಯನ್ನು ಗ್ರಾಮ ಪಂಚಾಯತಿ ಮಟ್ಟದಲ್ಲಿ ಜಾರಿಗೊಳಿಸಲಾಗುತ್ತಿದೆ.

ಫಸಲಿಗೆ ಬಂದ ಅಡಿಕೆ ಹಾಗೂ ಕೊಯ್ಲಿಗೆ ಬಂದ ವೀಳ್ಯೆದೆಲೆ ಇದರ ವ್ಯಾಪ್ತಿಗೆ ಒಳಪಟ್ಟಿದ್ದು, ಅಡಿಕೆಗೆ ಪ್ರತಿ ಹೆಕ್ಟರ್‌ಗೆ ₹ 1.28 ಲಕ್ಷ ವಿಮೆಗೆ ₹ 6,400 ವಿಮಾ ಕಂತು ಹಾಗೂ ವೀಳ್ಯೆದೆಲೆಗೆ ಪ್ರತಿ ಹೆಕ್ಟರ್‌ಗೆ ₹ 1.17 ಲಕ್ಷ ವಿಮೆಗೆ ₹ 5,850 ಕಂತು ಪಾವತಿಸಬೇಕು. ಕಂತು ಪಾವತಿಸಲು ಜುಲೈ 15 ಕಡೆಯ ದಿನ.

ರೈತರು ಬ್ಯಾಂಕ್ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಕಂತು ಪಾವತಿಸಿ ನೋಂದಣಿ ಮಾಡಿಸಬೇಕು.  ಮಾಹಿತಿಗೆ ತೋಟಗಾರಿಕೆ ಕಚೇರಿ, ಹೋಬಳಿ ಮಟ್ಟದ ಸಹಾಯಕ ತೋಟಗಾರಿಕೆ ಅಧಿಕಾರಿ, ಅಥವಾ ಸಮೀಪದ ಬ್ಯಾಂಕ್‌ಗಳನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕಿ ಜಿ.ಪಿ. ರೇಖಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.