ADVERTISEMENT

19 ಗ್ರಾ.ಪಂಗಳಿಂದ ₹ 9.96 ಕೋಟಿ ವಿದ್ಯುತ್ ಬಿಲ್ ಬಾಕಿ

ಬಿಲ್ ಪಾವತಿಗೆ 7 ದಿನಗಳ ಗಡುವು

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 8:41 IST
Last Updated 13 ಜೂನ್ 2022, 8:41 IST

ದಾವಣಗೆರೆ: ಬೆಸ್ಕಾಂ ದಾವಣಗೆರೆ ಉಪವಿಭಾಗ ವ್ಯಾಪ್ತಿಯಲ್ಲಿ 19 ಗ್ರಾಮ ಪಂಚಾಯಿತಿಗಳ ವಿದ್ಯುತ್ ಬಿಲ್ ₹ 9.96 ಕೋಟಿ ಬಾಕಿ ಇದೆ ಇದೆ.

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದಂತೆ ಮೇ 2022ರ ಅಂತ್ಯಕ್ಕೆ ಈ ಗ್ರಾಮ ಪಂಚಾಯತಿಗಳ ಕುಡಿಯುವ ನೀರು ಹಾಗೂ ಬೀದಿ ದೀಪಗಳು ವಿದ್ಯುತ್ ಬಿಲ್‌ ಅನ್ನು 7 ದಿನಗಳೊಳಗೆ ಪಾವತಿಸುವಂತೆ ಬೆಸ್ಕಾಂ ಆಯಾ ಗ್ರಾಮ ಪಂಚಾಯಿತಿಗಳ ಪಿಡಿಒಗಳಿಗೆ ಗಡುವು ನೀಡಿದೆ.

ವಿದ್ಯುತ್ ಬಿಲ್ ಬಾಕಿ ಮೊತ್ತವನ್ನು ಪಾವತಿಸದೇ ಇದ್ದಲ್ಲಿ ಗ್ರಾಮ ಪಂಚಾಯಿತಿ ಪಿಡಿಒ ಕಚೇರಿಯ ಆರ್‌.ಆರ್ ಸಂಖ್ಯೆಗೆ ವರ್ಗಾವಣೆ ಮಾಡಿ ವಿದ್ಯುತ್ ಕಡಿತಗೊಳಿಸಲಾಗುವುದು. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅಗುವ ತೊಂದರೆಗೆ ಬೆಸ್ಕಾಂ ಗ್ರಾಮೀಣ ಉಪ ವಿಭಾಗ ದಾವಣಗೆರೆ ಜವಾಬ್ದಾರಿ ಅಲ್ಲ ಎಂದು ಸ್ಟಷ್ಟಪಡಿಸಿದೆ.

ADVERTISEMENT

‘20 ವರ್ಷಗಳಿಂದಲೂ ಈ ಗ್ರಾಮ ಪಂಚಾಯಿತಿಗಳು ವಿದ್ಯುತ್ ಬಿಲ್ ಅನ್ನು ಬಾಕಿ ಉಳಿಸಿಕೊಂಡು ಬಂದಿವೆ. ಸರ್ಕಾರವು 15ನೇ ಹಣಕಾಸು ಯೋಜನೆಯಡಿ ಶೇ 25 ‘ಪ್ರಿಯಾ ಸಾಫ್ಟ್’ ಖಾತೆಗಳಿಗೆ ಹಣ ಬಿಡುಗಡೆ ಮಾಡಿದೆ. ಅವುಗಳಲ್ಲಿ ಶೇ 50ರಷ್ಟನ್ನು ಪಾವತಿ ಮಾಡಿದ್ದಾರೆ. ಉಳಿದ ಹಣ ಪಾವತಿಸಿಲ್ಲ. ಬಡ್ಡಿ ಸೇರಿ ಮೊತ್ತ ದುಬಾರಿಯಾಗಿದೆ’ ಎಂದು ದಾವಣಗೆರೆ ಗ್ರಾಮೀಣ ಉಪವಿಭಾಗದ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸುಧೀರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.