ಹರಿಹರ: ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಾಗಿರುವುದರಿಂದ ಮೃತ ವ್ಯಕ್ತಿಯ ಅಂತಿಮ ಸಂಸ್ಕಾರ ನಡೆಸಲು ಮೃತರ ಕುಟುಂಬದವರು ಪರದಾಡಿದ ಘಟನೆ ಸೋಮವಾರ ನಗರದ ಹೊರವಲಯದ ಗುತ್ತೂರು ಗ್ರಾಮದಲ್ಲಿ ನಡೆಯಿತು.
ಗ್ರಾಮದ ಪರಿಶಿಷ್ಟ ಜಾತಿಯ ನಾಗಮ್ಮ ರಾಮಪ್ಪ ಬಳ್ಳಾರಿ ಇವರು ಭಾನುವಾರ ರಾತ್ರಿ ನಿಧನರಾದರು. ಮೃತರ ಅಂತಿಮ ಸಂಸ್ಕಾರಕ್ಕೆAದು ಸೋಮವಾರ ಬಂಧುಗಳು ನದಿ ದಡಕ್ಕೆ ಆಗಮಿಸಿದಾಗ ಅವರಿಗೆ ದಿಗ್ಭಾçಂತಿಯಾಯಿತು.
ಗ್ರಾಮದಿAದ ನದಿ ದಡದವರೆಗೆ ಚಟ್ಟಾ ಎತ್ತಿಕೊಂಡು ಬರುವುದು ಕೂಡ ದುಸ್ಸಾಹಸವೆ ಆಗಿದೆ, ಏಕೆಂದರೆ ಈ ರಸ್ತೆಯಲ್ಲಿ ಮಣ್ಣು, ಮರಳಿನ ಲೋಡ್ ಸಾಘನೆ ಮಾಡುವ ವಾಹನಗಳಿಂದಾಘಿ ರಸ್ತೆ ಹದಗೆಟ್ಟಿದೆ. ಮೃತ ದೇಹವನ್ನು ವಾಹನದಲ್ಲಿ ಸಾಗಿಸಲಾಗುವುದಿಲ್ಲ. ಆನರು ಹೊತ್ತುಕೊಂಡೆ ಸಾಗಿಸಬೇಕಿದೆ.
ನಂತರ ನದಿ ದಡಕ್ಕೆ ಬಂದರೆ ನದಿ ದಡದಲ್ಲಿ ಎಲ್ಲೆಲ್ಲು ನೀರಿದೆ, ಕೊನೆಗೆ ನದಿ ನೀರಲ್ಲೆ ಮುಂದೆ ಸಾಗಿ ಅಲ್ಲೆ ಇರುವ ಎತ್ತರದ ದಿಬ್ಬದ ಮೇಲೆ ನಾಗಮ್ಮರ ಅಂತಿಮ ಸಂಸ್ಕಾರ ನಡೆಸಲಾಯಿತು.
ಗ್ರಾಮದ ಬೇರೆ ಸಮುದಾಯದವರಿಗೆ ಎತ್ತರ ಪ್ರದೇಶದಲ್ಲಿ ಸ್ಮಶಾನವಿದೆ, ಆದರೆ ಗ್ರಾಮದ ಪರಿಶಿಷ್ಟ ಜಾತಿಯವರಿಗೆ ನದಿ ದಡವೇ ಸ್ಮಶಾನವಾಗಿದೆ. ಮಳೆಗಾಲದಲ್ಲಿ ನದಿಯಲ್ಲಿ ಪ್ರವಾಹ ಬಂದಾಗ ಇಡೀ ನದಿ ದಡ ಜಲಾವೃತವಾಗುವುದರಿಂದ ಪ್ರತಿ ವರ್ಷ ಈ ಸಮಸ್ಯೆ ಈ ಸಮುದಾಯದವರಿಗೆ ಎದುರಾಗುತ್ತದೆ.
ಕಳೆದ ಮಳೆಗಾಲದಲ್ಲೂ ಈ ಸಮುದಾಯದವರು ಈ ಸಮಸ್ಯೆ ಎದುರಿಸಿದಾಗ ತಾಲ್ಲೂಕು ಆಡಳಿತದವರು ಎತ್ತರದ ಪ್ರದೇಶದಲ್ಲಿ ಪ್ರತ್ಯೇಕ ಸ್ಮಶಾನ ವ್ಯವಸ್ಥೆ ಮಾಡುವುದಾಗಿ ಈ ಸಮುದಾಯದವರಿಗೆ ನೀಡಿದ ಭರವಸೆ ಈಡೇರಿಲ್ಲ ಎಂಬ ಬೇಸರ ಈ ತಳ ಸಮುದಾಯದವರಿಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.