ADVERTISEMENT

ನ್ಯಾಮತಿ | 'ಅಕ್ಕಮಹಾದೇವಿ ಜೀವನ ಮಹಿಳೆಯರಿಗೆ ಆದರ್ಶಪ್ರಾಯ '

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 16:09 IST
Last Updated 16 ಏಪ್ರಿಲ್ 2025, 16:09 IST
ನ್ಯಾಮತಿಯಲ್ಲಿ ಅಕ್ಕಮಹಾದೇವಿ ಜಯಂತ್ಯುತ್ಸವ ಆಚರಿಸಲಾಯಿತು
ನ್ಯಾಮತಿಯಲ್ಲಿ ಅಕ್ಕಮಹಾದೇವಿ ಜಯಂತ್ಯುತ್ಸವ ಆಚರಿಸಲಾಯಿತು   

ನ್ಯಾಮತಿ: ವಚನಕಾರ್ತಿ ಅಕ್ಕಮಹಾದೇವಿ ಜೀವನ ಮಹಿಳೆಯರಿಗೆ ಆದರ್ಶಪ್ರಾಯವಾದುದು ಎಂದು ಸಮುದಾಯ ಆರೋಗ್ಯ ಕೇಂದ್ರದ ಶುಶ್ರೂಷಕಿ ಮಂಜುಳಾ ಕಠಾರೆ ತಿಳಿಸಿದರು.

ಪಟ್ಟಣದ ಕಲ್ಲುಮಠದಲ್ಲಿ ಕದಳಿ ಮಹಿಳಾ ವೇದಿಕೆ ಮತ್ತು ಶರಣ ಸಾಹಿತ್ಯ ಪರಿಷತ್‌ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಅಕ್ಕಮಹಾದೇವಿ ಜಯಂತ್ಯುತ್ಸವ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಅಂಬಿಕಾ ಬಿದರಗಡ್ಡೆ ಅಧ್ಯಕ್ಷತೆ ವಹಿಸಿದ್ದರು. ಲಿಂಗೈಕ್ಯ ಷಡಕ್ಷರಯ್ಯ ಮತ್ತು ಲಿಂಗೈಕ್ಯ ಗೌರಮ್ಮ ಒಡನಾಳು ದತ್ತಿ ಉಪನ್ಯಾಸ ನಡೆಯಿತು.

ADVERTISEMENT

ಶರಣ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಕೆ.ಭೋಜರಾಜಪ್ಪ, ಕನ್ನಡ ಸಾಹಿತ್ಯ ಪರಿಷತ್‌ ಗೌರವ ಕಾರ್ಯದರ್ಶಿ ಎಸ್.ಜಿ.ಬಸವರಾಜಪ್ಪ, ಕದಳಿ ವೇದಿಕೆ ಗೌರವಾಧ್ಯಕ್ಷೆ ಪುಷ್ಪಲತಾ, ಈ.ಸುಮಲತಾ, ಉಷಾ, ಉಮಾದೇವಿ, ಸೌಭಾಗ್ಯ, ರತ್ನಮ್ಮ, ಗೀತಾ, ವೈಷ್ಣವಿ, ಹವಳದ ವಿಶಾಲಾಕ್ಷಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.