ADVERTISEMENT

ವಿದ್ಯುತ್ ಕಂಬಕ್ಕೆ ಟಿಪ್ಪರ್‌ ಡಿಕ್ಕಿ; ಭತ್ತದ ಹುಲ್ಲು ಭಸ್ಮ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 7:30 IST
Last Updated 14 ಡಿಸೆಂಬರ್ 2025, 7:30 IST
ಅಪರಾದ ಸುದ್ದಿ
ಅಪರಾದ ಸುದ್ದಿ   

ಕಡರನಾಯ್ಕನಹಳ್ಳಿ: ಸಮೀಪದ ನಂದಿಗಾವಿ ಧೂಳೆಹೊಳೆ ಮಧ್ಯದಲ್ಲಿ ಶನಿವಾರ ವಿದ್ಯುತ್ ಕಂಬಕ್ಕೆ ಟಿಪ್ಪರ್‌ ಡಿಕ್ಕಿ ಹೊಡೆದ ಪರಿಣಾಮ ನಾಲ್ಕು ಲೋಡ್ ಭತ್ತದ ಹುಲ್ಲು ಬೆಂಕಿಗೆ ಆಹುತಿಯಾಗಿದೆ.

ಟಿಪ್ಪರ್ ಚಾಲಕ ವೀರಮಣಿ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಚಾಲಕನ ನಿಯಂತ್ರಣ ತಪ್ಪಿದ ವಾಹನ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಕಂಬ ಮುರಿದು ತಂತಿಗಳಿಂದ ವಿದ್ಯುತ್ ಪ್ರವಹಿಸಿ ಸಮೀಪದ ಜಮೀನಿನಲ್ಲಿ ಇದ್ದ ರವಿಕುಮಾರ್ ಎಂಬುವವರ ಭತ್ತದ ಹುಲ್ಲು ಭಸ್ಮವಾಗಿದೆ. ತಕ್ಷಣ ಅಗ್ನಿ ಶಾಮಕ ದಳದವರು ಬಂದು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಹುತ ತಪ್ಪಿಸಿದ್ದಾರೆ.

ADVERTISEMENT

ಟಿಪ್ಪರ್‌ಗೆ ನೋಂದಣಿ ಸಂಖ್ಯೆ ಇಲ್ಲ. ಇಂತಹ ಟಿಪ್ಪರ್‌ಗಳು ಬೈಪಾಸ್ ಮತ್ತು ಮುಖ್ಯ ರಸ್ತೆಗಳಲ್ಲಿ ಯಾರ ಗಮನಕ್ಕೂ ಬಾರದೆ ಸಂಚರಿಸುವುದು ವಿಪರ್ಯಾಸ ಎಂದು ರೈತರು ಅಭಿಪ್ರಾಯಪಟ್ಟರು.

ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ, ಬೆಸ್ಕಾಂ ಅಧಿಕಾರಿಗಳು ಭೇಟಿ ನೀಡಿದರು. ಮಲೇಬೆನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.