ಮಲೇಬೆನ್ನೂರು: ‘ಸರ್ಕಾರದ ಮಾರ್ಗಸೂಚಿಯಂತೆ ಈದ್ ಮಿಲಾದ್ ಹಬ್ಬ ಆಚರಿಸಿ’ ಎಂದು ಮುಸ್ಲಿಂ ಸಮುದಾಯದವರಿಗೆ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಡಿವೈಎಸ್ಪಿ ಬಸವರಾಜ್ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕರೆದಿದ್ದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
‘ಡಿಜೆಗೆ ಅವಕಾಶ ಇರುವುದಿಲ್ಲ. ನಿಗದಿಪಡಿಸಿದ ಮಾರ್ಗದಲ್ಲಿ ಮೆರವಣಿಗೆ ಮಾಡಬೇಕು. ಸಮಯ ಪಾಲನೆ ಕಡ್ಡಾಯ, ಮೆರವಣಿಗೆ ಹಾಗೂ ಆಯಕಟ್ಟಿನ ಸ್ಥಳಕ್ಕೆ ಬಿಗಿ ಭದ್ರತೆ ಒದಗಿಸಲಾಗುವುದು’ ಎಂದರು.
ಪುರಸಭೆ ನಾಮ ನಿರ್ದೇಶಿತ ಸದಸ್ಯ ಆರೀಫ್ ಅಲಿ, ‘ದರ್ಗಾದಿಂದ ಮೆರವಣಿಗೆ ಆರಂಭವಾಗಿ ಶಾದಿ ಮಹಲಿನ ಬಳಿ ಮುಕ್ತಾಯವಾಗುತ್ತದೆ. ಹಳೆಯ ಮಾರ್ಗ ಸರಿಯಾಗಿತ್ತು, ಹೊಸ ಮಾರ್ಗ ಬೇಡ’ ಎಂದರು.
‘ಈಗಾಗಲೇ ಮಾರ್ಗ ನಿಗದಿ ಮಾಡಲಾಗಿದೆ, ಬದಲಾವಣೆ ಮಾಡಲಾಗುವುದಿಲ್ಲ’ ಎಂದು ಪೊಲೀಸರು ತಿಳಿಸಿದರು.
ಪುರಸಭೆ ಸದಸ್ಯರಾದ ನಯಾಜ್, ಯೂಸೂಫ್, ಸಾಬೀರ ಅಲಿ ಶಾಹ್ ಅಬ್ರಾರ್, ನಾಗರಿಕರಾದ ರುಸ್ತುಂ, ದಾದಾವಲಿ, ಸದ್ದಾಂ, ಜೀಯಾವುಲ್ಲ, ಜಾಮಿಯಾ ಮಸೀದಿಯ ಇಜಾಜ್ ಖಾಸಿಂ ಸಾಬ್, ಗುಲ್ಜಾರ್ ಅಹ್ಮದ್, ಬುಡ್ಡವರ ರಹೀಂ, ರಿಹಾನ್, ಮೀಯಾಸಾಬ್, ಚಮನ್ ಸಾಬ್, ವಿವಿಧ ಮಸೀದಿಗಳ ಮುತಾವಲಿಗಳು, ಮುಖಂಡರು ಇದ್ದರು.
ಹರಿಹರ ವೃತ್ತ ಸಿಪಿಐ ಸುರೇಶ ಸಗರಿ ಪಿಎಸ್‌ಐ ಪ್ರಭು ಕೆಳಗಿನಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.