ADVERTISEMENT

ಸೆಮಿಗೆ ಬೆಂಗಳೂರು ತಂಡಗಳು

ಪಿಯು ಕಾಲೇಜುಗಳ ರಾಜ್ಯಮಟ್ಟದ ಫುಟ್‌ಬಾಲ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 5:17 IST
Last Updated 20 ಸೆಪ್ಟೆಂಬರ್ 2025, 5:17 IST
ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ರಾಯಚೂರು ತಂಡದ ಫೈಜನ್ (ಬೂದು ಪೋಷಾಕು) ಹಾಗೂ ಕಲಬುರಗಿ ತಂಡದ ಆಟಗಾರರು ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದರು  ಪ್ರಜಾವಾಣಿ ಚಿತ್ರ/ಸತೀಶ ಬಡಿಗೇರ್
ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ರಾಯಚೂರು ತಂಡದ ಫೈಜನ್ (ಬೂದು ಪೋಷಾಕು) ಹಾಗೂ ಕಲಬುರಗಿ ತಂಡದ ಆಟಗಾರರು ಚೆಂಡಿನ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನಿಸಿದರು  ಪ್ರಜಾವಾಣಿ ಚಿತ್ರ/ಸತೀಶ ಬಡಿಗೇರ್   

ದಾವಣಗೆರೆ: ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ತಂಡಗಳು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಫುಟ್‌ಬಾಲ್‌ ಟೂರ್ನಿಯ ಬಾಲಕರ ವಿಭಾಗದಲ್ಲಿ ಸೆಮಿಫೈನಲ್‌ ಪ್ರವೇಶಿಸಿವೆ. 

ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಹಾಗೂ ಆನಂದ ಪದವಿಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪಂದ್ಯಗಳಲ್ಲಿ ಬೆಂಗಳೂರು ದಕ್ಷಿಣ ಹಾಗೂ ಬೆಂಗಳೂರು ಉತ್ತರ ತಂಡಗಳು ಅಮೋಘ ಪ್ರದರ್ಶನ ನೀಡಿದವು.

ನಾಲ್ಕರ ಘಟ್ಟದ ಹಾದಿಯಲ್ಲಿ ಬೆಂಗಳೂರು ಉತ್ತರ ತಂಡವು ಮೈಸೂರು (3–1 ಗೋಲು), ದಕ್ಷಿಣ ಕನ್ನಡ (3–1) ಹಾಗೂ ರಾಯಚೂರು (4–1) ತಂಡಗಳನ್ನು ಮಣಿಸಿತು. ಬೆಂಗಳೂರು ದಕ್ಷಿಣ ತಂಡವು ಚಿತ್ರದುರ್ಗ (1–0) ಹಾಗೂ ಕೋಲಾರ (3–2) ತಂಡಗಳ ವಿರುದ್ಧ ಗೆಲುವು ದಾಖಲಿಸಿತು. 

ADVERTISEMENT

ಶನಿವಾರ ಧಾರವಾಡ ಮತ್ತು ಉಡುಪಿ ಹಾಗೂ ಬಳ್ಳಾರಿ ಮತ್ತು ಕೊಡಗು ತಂಡಗಳ ನಡುವೆ ಕ್ವಾರ್ಟರ್‌ ಫೈನಲ್‌ ಪಂದ್ಯಗಳು ನಡೆಯಲಿವೆ. 

ಇತರೆ ಪಂದ್ಯಗಳಲ್ಲಿ ಕಲಬುರಗಿ 2–1ರಿಂದ ವಿಜಯನಗರ, ರಾಯಚೂರು 2–0ರಿಂದ ರಾಮನಗರ, ದಕ್ಷಿಣ ಕನ್ನಡ 2–1ರಿಂದ ಹಾವೇರಿ, ರಾಯಚೂರು 2–0ರಿಂದ ಕಲಬುರಗಿ, ತುಮಕೂರು 1–0ರಿಂದ ಯಾದಗಿರಿ, ಬಳ್ಳಾರಿ 1–0ರಿಂದ ಚಾಮರಾಜನಗರ, ಬೆಳಗಾವಿ 1–0ರಿಂದ ತುಮಕೂರು, ಚಿಕ್ಕೋಡಿ 3–0ರಿಂದ ದಾವಣಗೆರೆ, ಬಾಗಲಕೋಟೆ 1–0ರಿಂದ ಬೀದರ್‌, ಧಾರವಾಡ 1–0ರಿಂದ ವಿಜಯಪುರ, ಕೊಡಗು 3–0ರಿಂದ ಶಿವಮೊಗ್ಗ, ಚಿಕ್ಕಬಳ್ಳಾಪುರ 1–0ರಿಂದ ಗದಗ, ಚಾಮರಾಜನಗರ 1–0ರಿಂದ ಕೊಪ್ಪಳ, ಉಡುಪಿ 1–0ರಿಂದ ಹಾಸನ, ಬಳ್ಳಾರಿ 1–0ರಿಂದ ಮಂಡ್ಯ, ಉತ್ತರ ಕನ್ನಡ 2–1ರಿಂದ ಚಿಕ್ಕೋಡಿ, ಕೊಡಗು 2–0ರಿಂದ ಬಾಗಲಕೋಟೆ, ಉಡುಪಿ 2–0ರಿಂದ ಚಿಕ್ಕಬಳ್ಳಾಪುರ, ಧಾರವಾಡ 5–4ರಿಂದ ಉತ್ತರ ಕನ್ನಡ ತಂಡಗಳನ್ನು ಸೋಲಿಸಿದವು. 

ವಿಜಯಪುರ ಸೆಮಿಗೆ: ಬಾಲಕಿಯರ ವಿಭಾಗದಲ್ಲಿ ವಿಜಯಪುರ ತಂಡವು ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿದೆ. ಈ ತಂಡವು ಹಾಸನ (7–0) ಹಾಗೂ ಬೆಂಗಳೂರು ಉತ್ತರ (2–1) ತಂಡಗಳನ್ನು ಸೋಲಿಸಿತು.

ದಾವಣಗೆರೆ ಮತ್ತು ದಕ್ಷಿಣ ಕನ್ನಡ, ಉಡುಪಿ ಮತ್ತು ಬೆಳಗಾವಿ, ಬೆಂಗಳೂರು ದಕ್ಷಿಣ ಹಾಗೂ ಧಾರವಾಡ ತಂಡಗಳ ನಡುವೆ ಶನಿವಾರ ಎಂಟರ ಘಟ್ಟದ ಪಂದ್ಯಗಳು ನಡೆಯಲಿವೆ. 

ಇತರೆ ಪಂದ್ಯಗಳಲ್ಲಿ ಬೆಂಗಳೂರು ಉತ್ತರ 7–0ರಿಂದ ಕೊಪ್ಪಳ, ಬೆಂಗಳೂರು ದಕ್ಷಿಣ 5–0ರಿಂದ ಕೋಲಾರ, ಬೆಳಗಾವಿ 3–0ರಿಂದ ಬಳ್ಳಾರಿ, ದಾವಣಗೆರೆ 2–0ರಿಂದ ಚಿಕ್ಕಬಳ್ಳಾಪುರ, ಮೈಸೂರು 1–0ರಿಂದ ಶಿವಮೊಗ್ಗ, ಧಾರವಾಡ 5–0ರಿಂದ ಮಂಡ್ಯ, ಬೆಳಗಾವಿ 3–0ರಿಂದ ಉತ್ತರ ಕನ್ನಡ, ಬಾಗಲಕೋಟೆ 1–0ರಿಂದ ಚಿತ್ರದುರ್ಗ, ಬೆಂಗಳೂರು ದಕ್ಷಿಣ 2–0ರಿಂದ ಕೊಡಗು, ಉಡುಪಿ 1–0ರಿಂದ ಹಾವೇರಿ ತಂಡವನ್ನು ಮಣಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.