ADVERTISEMENT

ದಾವಣಗೆರೆ: ಲಾಕ್‌ಡೌನ್‌ನಿಂದ ಕಾರ್ಮಿಕರ ಬದುಕು ಬೀದಿಗೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 16:15 IST
Last Updated 10 ಜೂನ್ 2020, 16:15 IST
ದಾವಣಗೆರೆ ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ನಾಯಕಿ ಜಬೀನಾಖಾನಂ ಮಾತನಾಡಿದರು
ದಾವಣಗೆರೆ ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ನಾಯಕಿ ಜಬೀನಾಖಾನಂ ಮಾತನಾಡಿದರು   

ದಾವಣಗೆರೆ: ಯಾವುದೇ ಪೂರ್ವ ತಯಾರಿಯಿಲ್ಲದೇ ಕೇಂದ್ರ ಮತ್ತು ರಾಜ್ಯ ಸರ್ಕಾರ ಲಾಕ್‌ಡೌನ್‌ ಮಾಡಿದ್ದರಿಂದ ಕಾರ್ಮಿಕರ ಬದುಕು ಬೀದಿಗೆ ಬಿತ್ತು ಎಂದು ಎಐಟಿಯುಸಿ ಹಿರಿಯ ಮುಖಂಡ ಎಚ್‌.ಕೆ. ರಾಮಚಂದ್ರಪ್ಪ ಟೀಕಿಸಿದರು.

ದಾವಣಗೆರೆ ನೆರಳು ಬೀಡಿ ಕಾರ್ಮಿಕರ ಯೂನಿಯನ್‌ನಿಂದ ಎಸ್‌ಎಸ್‌ಎಂ ನಗರದಲ್ಲಿ ಹಿರಿಯ ನಾಗರಿಕರಿಗೆ ಮತ್ತು ಬೀಡಿ ಕಾರ್ಮಿಕರಿಗೆ ಉಚಿತವಾಗಿ ಮಾಸ್ಕ್‌ಗಳನ್ನು ವಿತರಿಸಿ ಅವರು ಮಾತನಾಡಿದರು.

ವಲಸೆ ಕಾರ್ಮಿಕರು ದಾರಿಯಲ್ಲಿ ಸಾವು ನೋವು ಅನುಭವಿಸುತ್ತಿದ್ದಾರೆ. ಆದರೂ ಸರ್ಕಾರ ಕೊರೊನಾದಲ್ಲೂ ಜಾತಿ, ಧರ್ಮ, ಪಂಗಡಗಳನ್ನು ಹುಡುಕುತ್ತಿದೆ. ಮೋದಿ ಒಳ್ಳೆಯ ಭಾಷಣಕಾರನೇ ಹೊರತು ಒಳ್ಳೆಯ ಆಡಳಿತಗಾರನಲ್ಲ ಎಂದು ಹೇಳಿದರು.

ADVERTISEMENT

ಕಾರ್ಯಕ್ರಮದಲ್ಲಿ ರಾಮಣ್ಣ, ಜಬೀನಾಖಾನಂ, ಕರಿಬಸಪ್ಪ ಎಂ, ಅನ್ವರ್‌ಖಾನ್‌, ಸಬ್ರೀನ್‌ತಾಜ್‌ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.