ಬಸವಾಪಟ್ಟಣ: ಸಮೀಪದ ಹೊಸನಗರ ಗ್ರಾಮದಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ 3 ಮನೆಗಳು ಮತ್ತು ಒಂದು ಹಿಟ್ಟಿನ ಗಿರಣಿಗೆ ಹಾನಿಯಾಗಿದೆ.
ಹೊಸನಗರದ ಶಾರದಿಬಾಯಿ ಯಂಕಾನಾಯ್ಕ ಅವರ ಮನೆ, ಸರೋಜಾಬಾಯಿ ರೇಖಾನಾಯ್ಕ ಅವರ ಮನೆ, ಹಾಲಿಬಾಯಿ ತಿಪ್ಪಾನಾಯ್ಕ ಅವರ ಮನೆ ಹಾಗೂ ಸವಿತಾಬಾಯಿ ಭೀಮಾನಾಯ್ಕ ಅವರಿಗೆ ಸೇರಿದ ಹಿಟ್ಟಿನ ಗಿರಣಿಯ ಚಾವಣಿ ಹಾಗೂ ಗೋಡೆ ಕುಸಿದು ಬಿದ್ದಿದೆ.
ತಾಲ್ಲೂಕು ನೋಡಲ್ ಅಧಿಕಾರಿ ಸೋಮಶೇಖರ್, ಪಿಡಿಒ ರೇಣುಕಾ ಪ್ರಸಾದ್, ಗ್ರಾಮ ಲೆಕ್ಕಿಗ ಕುಮಾರನಾಯ್ಕ್ ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.