
ಬಂಧನ
ದಾವಣಗೆರೆ: ನವವಿವಾಹಿತೆ ಪ್ರಿಯಕರನೊಂದಿಗೆ ಪರಾರಿ ಆಗಿದ್ದರಿಂದ ನೊಂದು ಪತಿ, ಸೋದರಮಾವ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ನಗರದ ನಿವಾಸಿ ಶಿವಕುಮಾರ ಅಲಿಯಾಸ್ ಕುಮಾರ್ ಬಂಧಿತ ಆರೋಪಿ. ಬುಧವಾರವಷ್ಟೇ ಪ್ರಕರಣದ ಮತ್ತೊಬ್ಬ ಆರೋಪಿ ಸರಸ್ವತಿಯನ್ನು ಪೊಲೀಸರು ಬಂಧಿಸಿದ್ದರು.
ಮದುವೆಯಾದ 3 ತಿಂಗಳಲ್ಲೇ ಸರಸ್ವತಿ, ಪತಿ ಹರೀಶ್ ಅವರನ್ನು ತೊರೆದು ಪ್ರಿಯಕರ ಕುಮಾರ್ ಜೊತೆ ಪರಾರಿಯಾಗಿದ್ದರು. ಇದರಿಂದ ನೊಂದು ಹರೀಶ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಬಳಿಕ ಈ ಜೋಡಿಗೆ ಮದುವೆ ಮಾಡಿಸಿದ್ದ ಸರಸ್ವತಿಯ ಸೋದರಮಾವ ರುದ್ರೇಶ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದರು.
ಹಲ್ಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನ
ದಾವಣಗೆರೆ: ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗದ ನರಸಿಂಹ ಮೂರ್ತಿ, ರಾಕೇಶ್ ಎಲ್., ದಾವಣಗೆರೆಯ ವಿನಯ ಕುಮಾರ, ರಾಹುಲ್ ಆರ್.ಬಿ., ಉಮೇಶ ಯು.ಸಿ. ಬಂಧಿತರು.
ಡಿಸೆಂಬರ್ 8ರಂದು ಹರಿಹರದಲ್ಲಿ ಕಾಲೇಜುವೊಂದರ ಕ್ಯಾಂಟಿನ್ ಮ್ಯಾನೇಜರ್ ಸುಧೀರ್ ಕುಮಾರ ಪಾಂಡೆ ಅವರ ಮೇಲೆ ಆರೋಪಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.