ADVERTISEMENT

ದಾವಣಗೆರೆ | ಖೋಟಾ ನೋಟು ವಶ: ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 23 ಜುಲೈ 2025, 19:13 IST
Last Updated 23 ಜುಲೈ 2025, 19:13 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ದಾವಣಗೆರೆ: ಜಿಲ್ಲೆಯಲ್ಲಿ ಖೋಟಾ ನೋಟು ಚಲಾವಣೆಗೆ ಯತ್ನಿಸುತ್ತಿದ್ದ ನಾಲ್ವರನ್ನು ಬಂಧಿಸಿರುವ ಪೊಲೀಸರು, ₹ 500 ಹಾಗೂ ₹ 200 ಮುಖಬೆಲೆಯ, ಒಟ್ಟು ₹ 3,75,400 ಮೌಲ್ಯ ತೋರಿಸುವ ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ADVERTISEMENT

ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲ್ಲೂಕಿನ ನಡುವಿನ ತಾಂಡಾ ನಿವಾಸಿ ಸಂತೋಷಕುಮಾರ, ಕೊಟ್ಟೂರು ತಾಲ್ಲೂಕಿನ ಬೇವೂರು ಗ್ರಾಮದ ನಿವಾಸಿಗಳಾದ ವೀರೇಶ ಬಿ.ಪಿ., ಹನುಮಂತಪ್ಪ ಹಾಗೂ ದಾವಣಗೆರೆ ತಾಲ್ಲೂಕಿನ ಕುಕ್ಕವಾಡ ಗ್ರಾಮದ ಕುಬೇರಪ್ಪ ಬಂಧಿತರು.

ಕುಬೇರಪ್ಪ ವಿರುದ್ಧ ಹರಿಹರ, ಹೊಸಪೇಟೆ, ಮೈಸೂರು ಜಿಲ್ಲೆಯಲ್ಲಿ ಖೋಟಾ ನೋಟು ಹೊಂದಿರುವ ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.