ಧಾರಾಕಾರ ಮಳೆ
ದಾವಣಗೆರೆ: ಜಿಲ್ಲೆಯಲ್ಲಿ ಗುರುವಾರ ನಸುಕಿನವರೆಗೆ ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು, ಹಳ್ಳಗಳು ತುಂಬಿ ಹರಿಯುತ್ತಿವೆ. ನಗರ ವ್ಯಾಪ್ತಿಯ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ.
ಬುಧವಾರ ರಾತ್ರಿ 10.30ಕ್ಕೆ ಆರಂಭವಾದ ಮಳೆ, ಗುರುವಾರ ನಸುಕಿನವರೆಗೆ ಸುರಿದಿದೆ. ಮಧ್ಯರಾತ್ರಿ ಆರ್ಭಟಿಸಿದ ವರುಣ, ಬಳಿಕ ಸೋನೆಯಂತೆ ಸರಿಯಿತು.
ಹರಿಹರ ತಾಲ್ಲೂಕಿನ ಮಲೇಬೆನ್ನೂರು ಹೋಬಳಿ ವ್ಯಾಪ್ತಿಯಲ್ಲಿ ಹಳ್ಳ ಉಕ್ಕಿ ಹರಿಯುತ್ತಿದ್ದು, ಗುಳದಹಳ್ಳಿ - ಸಂಕ್ಲೀಪುರ ಸಂಪರ್ಕ ಕಡಿತವಾಗಿದೆ. ದೇವರಬೆಳಕೆರೆ ಪಿಕಪ್ ಜಲಾಶಯ ಭೋರ್ಗರೆಯುತ್ತಿದೆ. ಭತ್ತದ ಗದ್ದೆ, ತೋಟಗಳು ಜಲಾವೃತವಾಗಿವೆ.
ದಾವಣಗೆರೆಯ ಸರಸ್ವತಿ ನಗರ, ದೇವರಾಜ ಅರಸು ಬಡಾವಣೆ, ನಿಟುವಳ್ಳಿ ಸೇರಿದಂತೆ ಅನೇಕ ಕಡೆ ಮನೆಗಳಿಗೆ ನೀರು ನುಗ್ಗಿದೆ. ಬೆಳಗಿನ ಸಿಹಿ ನಿದ್ರೆಯಲ್ಲಿದ್ದ ಜನರು ನೀರು ನುಗ್ಗಿದ್ದು ಕಂಡು ಗಾಬರಿಯಾಗಿದ್ದರೆ. ಬೆಳಿಗ್ಗೆವರೆಗೆ ಮನೆಯಿಂದ ನೀರು ಹೊರಹಾಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.