ADVERTISEMENT

ದಾವಣಗೆರೆ | ಜಿಲ್ಲೆಯ ವಿವಿಧೆಡೆ ಬಿರುಸಿನ ಮಳೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 6:59 IST
Last Updated 13 ಆಗಸ್ಟ್ 2025, 6:59 IST
ದಾವಣಗೆರೆಯಲ್ಲಿ ಮಂಗಳವಾರ ಸುರಿದ ಮಳೆಯಿಂದ ಜಯದೇವ ವೃತ್ತ ಸಂಪೂರ್ಣ ಕೆರೆಯಂತಾಗಿತ್ತು. ರಸ್ತೆ ದಾಟಲು ವಿದ್ಯಾರ್ಥಿಗಳು ಪರದಾಡಿದ ದೃಶ್ಯ ಕಂಡು ಬಂದ ಬಗೆ –ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ
ದಾವಣಗೆರೆಯಲ್ಲಿ ಮಂಗಳವಾರ ಸುರಿದ ಮಳೆಯಿಂದ ಜಯದೇವ ವೃತ್ತ ಸಂಪೂರ್ಣ ಕೆರೆಯಂತಾಗಿತ್ತು. ರಸ್ತೆ ದಾಟಲು ವಿದ್ಯಾರ್ಥಿಗಳು ಪರದಾಡಿದ ದೃಶ್ಯ ಕಂಡು ಬಂದ ಬಗೆ –ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ   

ದಾವಣಗೆರೆ: ಜಿಲ್ಲೆಯ ವಿವಿಧೆಡೆ ಮಂಗಳವಾರ ಬಿರುಸಿನ ಮಳೆಯಾಗಿದೆ. ಗುಡುಗು ಸಹಿತ ಸುರಿದ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.

ಮಂಗಳವಾರ ಮಧ್ಯಾಹ್ನ ಆರಂಭವಾದ ಮಳೆ ಆಗಾಗ ಬಿಡುವು ನೀಡುತ್ತ ರಾತ್ರಿಯವರೆಗೂ ಸುರಿದಿದೆ. ಭತ್ತ ನಾಟಿ ಸೇರಿದಂತೆ ಕೃಷಿ ಚಟುವಟಿಕೆಗೆ ಅನುಕೂಲವಾಗಿದೆ.

ಬಿರುಸಾಗಿ ಸುರಿದ ಮಳೆಯಿಂದಾಗಿ ಚರಂಡಿಗಳು ತುಂಬಿ ರಸ್ತೆಯ ಮೇಲೆ ನೀರು ಹರಿದಿದೆ. ನಗರ ವ್ಯಾಪ್ತಿಯ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದವು. ಜಯದೇವ ವೃತ್ತ, ಗುಂಡಿ ವೃತ್ತ, ಪಿ.ಬಿ. ರಸ್ತೆ ಸೇರಿದಂತೆ ಹಲವೆಡೆ ಮೊಳಕಾಲುದ್ದ ನೀರು ನಿಂತಿತ್ತು.

ADVERTISEMENT

ಮಳೆ ಬಿಡುವು ನೀಡಿದರೂ ನೀರು ಹರಿಯದೇ ವಾಹನ ಸವಾರರು ತೊಂದರೆ ಅನುಭವಿಸಿದರು. ಪಾದಚಾರಿಗಳು ನೀರಿನಲ್ಲಿಯೇ ಹೆಜ್ಜೆಹಾಕಿದರು. ಸಂಜೆ ನಿಧಾನವಾಗಿ ಆರಂಭವಾದ ಮಳೆ ರಾತ್ರಿ ಹೊತ್ತಿಗೆ ಬಿರುಸು ಪಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.