ದಾವಣಗೆರೆ: ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಮತ್ತು ‘ಫ್ರೀಡಂ ಕುಕ್ಕಿಂಗ್ ಆಯಿಲ್’ ಸಹಯೋಗದಲ್ಲಿ ನಗರದ ಪಿ.ಬಿ. ರಸ್ತೆಯಲ್ಲಿರುವ ಹೊಸ ಬಸ್ ನಿಲ್ದಾಣದ ಬಳಿ ‘ಹೋಟೆಲ್ ಪಂಜುರ್ಲಿ’ ಸಭಾಭವನದಲ್ಲಿ ಸೆಪ್ಟೆಂಬರ್ 6ರಂದು ಬೆಳಿಗ್ಗೆ 10 ಗಂಟೆಯಿಂದ ‘ಕರುನಾಡ ಸವಿಯೂಟ’ ಸ್ಪರ್ಧೆ ಆಯೋಜಿಸಲಾಗಿದೆ. ವಿಭಿನ್ನ ರುಚಿಯ, ಸ್ವಾದಿಷ್ಟ ಅಡುಗೆ ಮಾಡಿ ತಂದು ಸ್ಪರ್ಧಿಸಿ ಬಹುಮಾನ ಗೆಲ್ಲುವ ಅವಕಾಶವಿದೆ.
ಸ್ನೇಹಿತರು ಅಥವಾ ಕುಟುಂಬ ಸದಸ್ಯರೊಂದಿಗೆ ಆಸಕ್ತರು ಸ್ಪರ್ಧೆಯಲ್ಲಿ ಪಾಲ್ಗೊಳ್ಳ ಬಹುದು. ಅಡುಗೆ ಕೌಶಲದಿಂದ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾಗಿ, ಆಕರ್ಷಕ ಬಹುಮಾನವನ್ನು ಗೆಲ್ಲಬಹುದು. ‘ಸುಧಾ’ ವಾರಪತ್ರಿಕೆಯಲ್ಲೂ ಕಾಣಿಸಿಕೊಳ್ಳಬಹುದು.
ಸ್ಪರ್ಧೆಗೆ ಎಲ್‌ಪಿಜಿ ಪಾರ್ಟ್‌ನರ್ ಆಗಿ ಇಂಡೇನ್, ಕಿಚನ್ ಪಾರ್ಟ್‌ನರ್ ಆಗಿ ಟಿಟಿಕೆ ಪ್ರೆಸ್ಟೀಜ್, ಸ್ಪೆಷಲ್ ಪಾರ್ಟ್‌ನರ್ ಆಗಿ ಭೀಮ ಜ್ಯುವೆಲರ್ಸ್, ಸ್ನ್ಯಾಕ್ಸ್ ಪಾರ್ಟ್‌ನರ್ ಆಗಿ ಲೇಯ್ಸ್, ಅಸೋಸಿಯೇಟ್ ಸ್ಪಾನ್ಸರ್‌ಗಳಾಗಿ ಎಸ್‌ಬಿಐ ಕಾರ್ಡ್, ವೆಂಕೋಬ್ ಚಿಕನ್ ಹಾಗೂ ಇಕೊ ಕ್ರಿಸ್ಟಲ್ ವಾಟರ್ ಟ್ರೀಟ್‌ಮೆಂಟ್ ಸಹಯೋಗ ನೀಡಿವೆ.
‘ಒಗ್ಗರಣೆ ಡಬ್ಬಿ’ ಕಾರ್ಯಕ್ರಮದ ಖ್ಯಾತಿಯ ಮುರುಳಿ ಅವರು ನಡೆಸಿಕೊಡಲಿರುವ ಅಡುಗೆ ಸಿದ್ಧಪಡಿಸುವುದರ ಕುರಿತ ಮಾಸ್ಟರ್‌ಕ್ಲಾಸ್‌ಗೆ ಹಾಜರಾಗಬಹುದು. ಅವರೇ ಸ್ಪರ್ಧೆಯಲ್ಲಿ ಆಹಾರ ಪದಾರ್ಥ ಗಳನ್ನು ಸವಿದು, ತೀರ್ಪನ್ನೂ ನೀಡುತ್ತಾರೆ.
ಶೆಫ್‌ಗಳು ತಮ್ಮ ಪಾಕ ಕೌಶಲವನ್ನು ಪ್ರದರ್ಶಿಸಿ ಬಹುಮಾನಗಳನ್ನು ಗೆದ್ದುಕೊಳ್ಳಬಹುದಾಗಿದೆ. ಆಸಕ್ತರು, ಮನೆಯಲ್ಲಿ ಸಿದ್ಧಪಡಿಸಿದ ಆಹಾರ ಪದಾರ್ಥದೊಂದಿಗೆ ಅಂದು ಬೆಳಿಗ್ಗೆ 9.30ರ ವೇಳೆಗೆ ಕಾರ್ಯಕ್ರಮದ ಸ್ಥಳದಲ್ಲಿ ಹಾಜರಿರಬೇಕು. ನೀವು ತರುವ ಆಹಾರ ಪದಾರ್ಥವು ಕರ್ನಾಟಕದ ಖಾದ್ಯ ಆಗಿರಬೇಕು. ರುಚಿ, ಹೊಸತನ ಹಾಗೂ ಪ್ರಸ್ತುತಿಯ ಮಾನದಂಡಗಳನ್ನು ಆಧರಿಸಿ ತೀರ್ಪು ನೀಡಲಾಗುತ್ತದೆ. ಆಹಾರ ಪದಾರ್ಥವನ್ನು ಇಡುವುದಕ್ಕೆ ಬೇಕಾದ ತಟ್ಟೆಗಳು, ಪರಿಕರಗಳು ಮತ್ತು ಅಗತ್ಯ ಖಾದ್ಯಾಲಂಕಾರ ಸಾಮಗ್ರಿಗಳನ್ನು ಸ್ಪರ್ಧಿಗಳೇ ತರಬೇಕು. ಸ್ಥಳದಲ್ಲೇ ನೋಂದಾಯಿಸಿಕೊಳ್ಳುವುದಕ್ಕೆ ಬೆಳಿಗ್ಗೆ 9ರಿಂದ 10ರ ವರೆಗೆ ಅವಕಾಶವಿದೆ.
ಸ್ಪರ್ಧೆಗೆ ಪ್ರವೇಶ ಉಚಿತವಿದೆ. ಉತ್ತಮ ಅಡುಗೆ ಕೌಶಲವುಳ್ಳವರಿಗೆ ಆಕರ್ಷಕ ಬಹುಮಾನ ದೊರೆಯಲಿದೆ. ಪ್ರಥಮ ಸ್ಥಾನ ಗಳಿಸಿದವರಿಗೆ ₹ 10,000, 2ನೇ ಸ್ಥಾನ ಪಡೆದವರಿಗೆ ₹ 7,000 ಹಾಗೂ 3ನೇ ಬಹುಮಾನವಾಗಿ ₹ 5,000 ನೀಡಲಾಗುವುದು. ಪಾಲ್ಗೊಳ್ಳಲು ಆಸಕ್ತಿ ಇರುವವರು ಇಲ್ಲಿ ನೀಡಲಾಗಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ನೋಂದಾಯಿಸಿಕೊಳ್ಳಬಹುದು ಅಥವಾ ಮೊ.ಸಂಖ್ಯೆ: 96069 12251/ 9844923404 ಸಂಪರ್ಕಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.