ದಾವಣಗೆರೆ: ನಗರದ ಹೈಸ್ಕೂಲ್ ಮೈದಾನದಲ್ಲಿ ಏಪ್ರಿಲ್ 6ರಂದು ಬೆಳಿಗ್ಗೆ 9 ಗಂಟೆಯಿಂದ 7ನೇ ರಾಜ್ಯಮಟ್ಟದ ಶ್ವಾನ ಪ್ರದರ್ಶನ ಹಾಗೂ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ದಾವಣಗೆರೆ ಪೆಟ್ ಲವರ್ಸ್ ಅಸೋಸಿಯೇಷನ್ ಅಧ್ಯಕ್ಷ ನಲ್ಲೂರು ಎಸ್. ರಾಘವೇಂದ್ರ ತಿಳಿಸಿದರು.
ವಯಸ್ಕ ಹಾಗೂ ಪಪ್ಪಿ ಎಂಬ ಎರಡು ವಿಭಾಗಗಲ್ಲಿ ಸ್ಪರ್ಧೆ ನಡೆಯಲಿದ್ದು, ವಯಸ್ಕ ವಿಭಾಗದ ಶ್ವಾನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ₹25,000, ದ್ವಿತೀಯ ಬಹುಮಾನ ₹15,000 ಮತ್ತು ತೃತೀಯ ಬಹುಮಾನ ₹10,000 ನಗದು ವಿತರಿಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
4ನೇ ಬಹುಮಾನ ₹8,000, 5ನೇ ಬಹುಮಾನ ₹5,000, 6ನೇ ಬಹುಮಾನ ₹4,000 ನೀಡಲಾಗುವುದು. ಬೆಸ್ಟ್ ಪಪ್ಪಿ ವಿಭಾಗದಲ್ಲಿ ಪ್ರಥಮ ಬಹುಮಾನ ₹8,000, ದ್ವಿತೀಯ ₹5,000 ಹಾಗೂ ತೃತೀಯ ₹3,000 ಬಹುಮಾನ ನೀಡಲಾಗುವುದು ಎಂದು ವಿವರಿಸಿದರು.
ಭಾರತೀಯ ಉತ್ತಮ ತಳಿಯ ಶ್ವಾನಕ್ಕೆ ₹5,000, ಭಾರತೀಯ ಉತ್ತಮ ಪಪ್ಪಿಗೆ ₹3,000, ಮಿಶ್ರ ತಳಿಗೆ ₹2,000 ಬಹುಮಾನ, ಬೆಸ್ಟ್ ಹ್ಯಾಂಡ್ಲರ್‌ಗೆ ₹2,000 ಮತ್ತು ಬೆಸ್ಟ್ ಜ್ಯೂನಿಯರ್ ಹ್ಯಾಂಡ್ಲರ್‌ಗೆ ₹1,000 ಬಹುಮಾನ ಇದೆ. 20ಕ್ಕೂ ಅಧಿಕ ತಳಿಯ ಶ್ವಾನಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು, ಒಟ್ಟು 250 ರಿಂದ 300 ಶ್ವಾನಗಳು ಸ್ಪರ್ಧೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಮುಂಗಡ ನೋಂದಣಿ ಶುಲ್ಕ ಪ್ರತೀ ಶ್ವಾನಕ್ಕೆ ₹500, ಸ್ಥಳದಲ್ಲಿಯೇ ನೋಂದಣಿಗೆ ₹800 ನಿಗದಿಪಡಿಸಲಾಗಿದೆ. ದೇಶಿ ಶ್ವಾನ ತಳಿಯ ಪ್ರದರ್ಶನಕ್ಕೆ ಉಚಿತ ಪ್ರವೇಶವಿದ್ದು, ಮಾಹಿತಿಗಾಗಿ 8310635957, 9902147853, 8496944635 ಸಂಪರ್ಕಿಸಬಹುದು ಎಂದು ತಿಳಿಸಿದರು.
ಪ್ರಮುಖರಾದ ಗುರುರಾಜ್, ಪವನ್, ಅರವಿಂದ್, ಮನೋಜ್, ಶ್ರೀರಾಜ್, ಸುನೀಲ್, ಶಿವು, ಅಕ್ಷಯ್, ಕಿರಣ್, ಗೋಪಾಲ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.