ADVERTISEMENT

ಕೆನರಾ ಬ್ಯಾಂಕ್‌ನಿಂದ ಕೊರೊನಾ ಸಂತ್ರಸ್ತರಿಗೆ ಆಹಾರ ವಿತರಣೆ‌

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 6:19 IST
Last Updated 10 ಜೂನ್ 2021, 6:19 IST
ಕೆನರಾ ಬ್ಯಾಂಕ್‌ ವತಿಯಿಂದ ದಾವಣಗೆರೆ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಬುಧವಾರ ಕೊರೊನಾ ಸಂತ್ರಸ್ತರಿಗೆ, ಕೊರೊನಾ ವಾರಿಯರ್‌ಗಳಿಗೆ ಹಾಗೂ ಸಂತ್ರಸ್ತರ ಪರಿಚಾರಕರಿಗೆ ಉಚಿತ ಆಹಾರ ವಿತರಣೆ ಮಾಡಲಾಯಿತು
ಕೆನರಾ ಬ್ಯಾಂಕ್‌ ವತಿಯಿಂದ ದಾವಣಗೆರೆ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಬುಧವಾರ ಕೊರೊನಾ ಸಂತ್ರಸ್ತರಿಗೆ, ಕೊರೊನಾ ವಾರಿಯರ್‌ಗಳಿಗೆ ಹಾಗೂ ಸಂತ್ರಸ್ತರ ಪರಿಚಾರಕರಿಗೆ ಉಚಿತ ಆಹಾರ ವಿತರಣೆ ಮಾಡಲಾಯಿತು   

ದಾವಣಗೆರೆ: ಕೆನರಾ ಬ್ಯಾಂಕ್ ದೇಶಕ್ಕಾಗಿ ಹಣಕಾಸು ಸೇವೆಯನ್ನು ಸಲ್ಲಿಸುವುದರ ಜೊತೆಗೆ ಸಾಮಾಜಿಕ ಬದ್ಧತೆಯಿಂದ ಸಮಾಜ ಸೇವೆ ಮಾಡುತ್ತಿರುವುದು ಇತರ ಹಣಕಾಸು ಸಂಸ್ಥೆಗಳಿಗೆ ಮಾದರಿ ಎಂದು ಮೇಯರ್‌ ಎಸ್.ಟಿ‌. ವೀರೇಶ್ ತಿಳಿಸಿದರು.

ಕೆನರಾ ಬ್ಯಾಂಕ್‌ ವತಿಯಿಂದ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಕೊರೊನಾ ಸಂತ್ರಸ್ತರಿಗೆ, ಕೊರೊನಾ ವಾರಿಯರ್‌ಗಳಿಗೆ ಹಾಗೂ ಸಂತ್ರಸ್ತರ ಪರಿಚಾರಕರಿಗೆ ಉಚಿತ ಆಹಾರ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.

ಕೆನರಾ ಬ್ಯಾಂಕಿನ ಕ್ಷೇತ್ರೀಯ ಕಾರ್ಯಾಲಯದ ವಿಭಾಗೀಯ ಪ್ರಬಂಧಕ‌ರಾದ ಜಿ.ಆರ್.ನಾಗರತ್ನ, ‘ಕೆ‌ನರಾ ಬ್ಯಾಂಕ್ ತನ್ನ ಸಾಮಾಜಿಕ ಬದ್ಧತೆಯ ಭಾಗವಾಗಿ ಕೊರೊನಾ ಜಾಗೃತಿ ಅಭಿಯಾನ, ಉಚಿತವಾಗಿ ಆಹಾರ ವಿತರಣೆ, ಮಾಸ್ಕ್ ವಿತರಣೆ, ಸಾನಿಟೈಸರ್ ವಿತರಣೆ ಮಾಡಿದೆ. ಜಿಲ್ಲಾ ಆಸ್ಪತ್ರೆಗೆ ಅಗತ್ಯ ಸಲಕರಣೆಗಳನ್ನೂ ಕೊಡುಗೆಯಾಗಿ ನೀಡಿದೆ. ಕೊರೊನಾ ಸಂತ್ರಸ್ತರಿಗೆ ಮತ್ತು ಆಸ್ಪತ್ರೆಗಳಿಗೆ ಹಲವಾರು ಸಾಲ ಯೋಜನೆಗಳನ್ನೂ ಜಾರಿದೆ ತಂದಿದೆ’ ಎಂದು ಹೇಳಿದರು.

ADVERTISEMENT

ಪಾಲಿಕೆಯ ನಾಮನಿರ್ದೇಶಿತ ಸದಸ್ಯ ಶಿವನಗೌಡ ಟಿ ಪಾಟೀಲ್, ಕೆನರಾ ಬ್ಯಾಂಕ್‌ನಕೆ‌.ರಾಘವೇಂದ್ರ ನಾಯರಿ, ಎಸ್.ವಿ. ರಾಮಕೃಷ್ಣ ನಾಯ್ಕ್, ಬಿ.ಎ. ಸುರೇಶ್, ಹಂಪಣ್ಣ, ಕೆ.ಶಶಿಕುಮಾರ್, ಕೆ. ವಿಶ್ವನಾಥ ಬಿಲ್ಲವ, ಆರ್. ಆಂಜನೇಯ, ಸಿ.ಪರಶುರಾಮ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.