ADVERTISEMENT

ದಾವಣಗೆರೆ|ಬಾಲಕ–ಬಾಲಕಿಯರ ಕ್ರೀಡಾಕೂಟ:ವಿವಿಧ ಶಾಲೆ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 5:45 IST
Last Updated 12 ನವೆಂಬರ್ 2025, 5:45 IST
<div class="paragraphs"><p>ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ಹರಿಹರದ ತರಳಬಾಳು ಶಾಲೆಯ ವಿದ್ಯಾರ್ಥಿನಿ ಕಾವ್ಯಾ, ಜಾವೆಲಿನ್‌ ಎಸೆಯಲು ಮುಂದಾದ ಕ್ಷಣ&nbsp;&nbsp;&nbsp; </p></div>

ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ಹರಿಹರದ ತರಳಬಾಳು ಶಾಲೆಯ ವಿದ್ಯಾರ್ಥಿನಿ ಕಾವ್ಯಾ, ಜಾವೆಲಿನ್‌ ಎಸೆಯಲು ಮುಂದಾದ ಕ್ಷಣ   

   

ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ

ದಾವಣಗೆರೆ: ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ 14 ಮತ್ತು 17 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಅಮೋಘ ಸಾಮರ್ಥ್ಯ ತೋರಿದ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾದರು. 

ADVERTISEMENT

ದಾವಣಗೆರೆ, ಜಗಳೂರು, ಹರಿಹರ, ಚನ್ನಗಿರಿ, ಹೊನ್ನಾಳಿ, ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ ಶೈಕ್ಷಣಿಕ ತಾಲ್ಲೂಕುಗಳ ಎಲ್ಲ ಸರ್ಕಾರಿ, ಅನುದಾನಿತ, ಅನುದಾನ ರಹಿತ ಹಾಗೂ ವಸತಿಯುತ ಪ್ರಾಥಮಿಕ, ಪ್ರೌಢಶಾಲೆಗಳ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೆಲುವಿಗಾಗಿ ಪೈಪೋಟಿ ನಡೆಸಿದರು. 

ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ‘ಧೂಡಾ’ ಅಧ್ಯಕ್ಷ ದಿನೇಶ್ ಶೆಟ್ಟಿ, ಡಿಡಿಪಿಐ ಜಿ.ಕೊಟ್ರೇಶ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಡಿಪಿಒ ವಿಜಯ್‌ಕುಮಾರ್, ಮುಖಂಡರಾದ ಡಿ.ರಾಮಪ್ಪ, ಹಾಲಪ್ಪ, ಶ್ರೀನಿವಾಸ್, ಜಿ.ಶ್ರೀನಿವಾಸ್ ಹಾಗೂ ಇತರರು ಉಪಸ್ಥಿತರಿದ್ದರು.  

ರಾಜ್ಯಮಟ್ಟಕ್ಕೆ ಆಯ್ಕೆಯಾದವರು: 

14 ವರ್ಷದೊಳಗಿನವರ ವಿಭಾಗ:

ಬಾಲಕಿಯರು: 100 ಮೀ. ಓಟ ಎಸ್.ಡಿ.ಜಾಹ್ನವಿ (ಪ್ರಥಮ), ಕೆ.ಆರ್.ಸಂಜನಾ (ದ್ವಿತೀಯ). 200 ಮೀ. ಓಟ: ಎಸ್.ಡಿ.ಜಾಹ್ನವಿ (ಪ್ರ), ಎಚ್.ಎನ್.ಗೌತಮಿ (ದ್ವಿ). 400 ಮೀ ಓಟ: ಎಂ.ಸಂಜನಾ (ಪ್ರ), ಕೆ.ಜಿ.ಕೃಪಾ (ದ್ವಿ). 600 ಮೀ ಓಟ: ಜಿ.ಎ.ದೀಕ್ಷಾ (ಪ್ರ), ಎಂ.ಸಂಜನಾ (ದ್ವಿ). 80 ಮೀ. ಹರ್ಡಲ್ಸ್ ಡಿ.ಕೆ.ಯುತಶ್ರೀ (ಪ್ರ), ಬಿ.ಎಸ್.ವಾಣಿಶ್ರೀ (ದ್ವಿ). 4X100 ಮೀ. ರಿಲೇ ದೀಕ್ಷಾ ಮತ್ತು ತಂಡ (ಪ್ರ), ಎಂ.ಆರ್.ವಿಶಾಂಕಾ ಮತ್ತು ತಂಡ (ದ್ವಿ). ಲಾಂಗ್‌ ಜಂಪ್‌: ಎಸ್.ಡಿ.ಜಾಹ್ನವಿ (ಪ್ರ), ಎಂ.ಜಿ.ಜಯಶ್ರೀ (ದ್ವಿ). ಹೈಜಂಪ್‌: ಕೀರ್ತನಾ (ಪ್ರ), ಕೆ.ಆರ್.ವರ್ಷ (ದ್ವಿ). ಡಿಸ್ಕಸ್‌ ಥ್ರೋ: ಆರ್.ಕೆ.ನಂದಿತಾ (ಪ್ರ), ಪಿ.ಜೆ.ಪ್ರಗತಿ (ದ್ವಿ). ಶಾಟ್‌ಪಟ್‌: ಲಕುಮಿ (ಪ್ರ), ಆರ್.ಕೆ.ನಂದಿತಾ (ದ್ವಿ).

ಬಾಲಕರು: 100 ಮೀ. ಓಟ: ಎಸ್.ಹೇಮಂತ್ (ಪ್ರ), ಜಿ.ಗೌತಮ್ (ದ್ವಿ), 200 ಮೀ. ಓಟ: ಜಿ.ಗೌತಮ್ (ಪ್ರ), ನೂರ್ ಮಹಮ್ಮದ್ (ದ್ವಿ). 400 ಮೀ. ಓಟ: ಆರ್.ಆರ್.ಲೋಹಿತ್ (ಪ್ರ), ಎಸ್.ನಮ್ರತ್ (ದ್ವಿ). 600 ಮೀ. ಓಟ: ಎಂ.ಕುಶಾಲ್ (ಪ್ರ), ಎಸ್.ಅರ್ಜುನ್ (ದ್ವಿ). 80 ಮೀ. ಹರ್ಡಲ್ಸ್: ನಾಗರಾಜ್ (ಪ್ರ), ಜಾವೇದ್ (ದ್ವಿ). 4X100 ಮೀ. ರಿಲೇ: ಆಯುಷ್ ಮತ್ತು ತಂಡ (ಪ್ರ), ಅರ್ಜುನ್ ಮತ್ತು ತಂಡ (ದ್ವಿ). ಲಾಂಗ್‌ ಜಂಪ್‌: ಎನ್.ಮೈಲಾರಿ (ಪ್ರ), ಎಚ್.ಉಮೇಶ್ (ದ್ವಿ). ಹೈಜಂಪ್‌: ನಾಗರಾಜ್ (ಪ್ರ), ಎಂ.ಪಿ.ಶ್ರೇಯಸ್ (ದ್ವಿ). ಡಿಸ್ಕಸ್‌ ಥ್ರೋ: ಎಸ್.ಎಚ್.ಶ್ರೇಯಸ್ (ಪ್ರ), ಎಸ್.ನಿತಿನ್‌ಕುಮಾರ್ (ದ್ವಿ). ಶಾಟ್‌ಪಟ್‌: ಎಸ್.ಎಚ್.ಶ್ರೇಯಸ್ (ಪ್ರ), ಪಿ.ಬಿ.ಅಜಿತ್‌ಕುಮಾರ್ (ದ್ವಿ). 

17 ವರ್ಷದೊಳಗಿನ ಬಾಲಕಿಯರು:

100 ಮೀ. ಓಟ: ಭುವನೇಶ್ವರಿ (ಪ್ರ), ಎಲ್.ಎನ್.ಸುಕನ್ಯಾ (ದ್ವಿ). 200 ಮೀ ಓಟ: ಭುವನೇಶ್ವರಿ (ಪ್ರ), ಜಿ.ಎಂ.ಸಿಂಧೂ (ದ್ವಿ). 400 ಮೀ. ಓಟ: ಎಸ್.ಎಚ್.ಚಂದನಾ (ಪ್ರ), ಪ್ರಜ್ಞಾ (ದ್ವಿ). 800 ಮೀ. ಓಟ: ಸಂಸ್ಕೃತಿ ಎನ್.ನಂಜಪ್ಪನವರ್ (ಪ್ರ), ರಾಕಾ (ದ್ವಿ). 1,500 ಮೀ. ಓಟ: ಸಂಸ್ಕೃತಿ ಎನ್. ನಂಜಪ್ಪನವರ್ (ಪ್ರ), ಗೌತಮಿ (ದ್ವಿ). 3000 ಮೀ. ಓಟ: ಸಂಸ್ಕೃತಿ ಎನ್. ನಂಜಪ್ಪನವರ್ (ಪ್ರ), ಪಿ.ಎಸ್.ಗೌತಮಿ (ದ್ವಿ). 3 ಕಿ.ಮೀ ನಡಿಗೆ: ಬಿ.ಬಿ.ಶ್ವೇತಾ (ಪ್ರ), ಪಿ.ಯಶೋಧಾ (ದ್ವಿ). 100 ಮೀ. ಹರ್ಡಲ್ಸ್: ಎಸ್.ಭೂಮಿಕಾ (ಪ್ರ), ಭಾವನಾ (ದ್ವಿ). 400 ಮೀ. ಹರ್ಡಲ್ಸ್: ರಾಜೇಶ್ವರಿ (ಪ್ರ), ಬೃಂದಾ (ದ್ವಿ). ಲಾಂಗ್‌ ಜಂಪ್‌: ಕೆ.ಪಿ.ಸಹನಾ (ಪ್ರ), ಅನುಷಾ (ದ್ವಿ). ಹೈಜಂಪ್‌: ಎಚ್.ವಿ.ನೀಲಮ್ಮ (ಪ್ರ), ಆರ್.ಅಶ್ವಿನಿ (ದ್ವಿ). ಟ್ರಿಪಲ್‌ ಜಂಪ್: ಕೆ.ಪಿ.ಸಹನಾ (ಪ್ರ), ಅನ್ನಪೂರ್ಣೇಶ್ವರಿ (ದ್ವಿ). ಶಾಟ್‌ಪಟ್‌: ಡಿ.ಎಸ್.ವಿದ್ಯಾಶ್ರೀ (ಪ್ರ), ಡಿ.ಎಚ್.ಆಶಾ (ದ್ವಿ). ಡಿಸ್ಕಸ್‌ ಥ್ರೋ: ಬಿ.ಸಿ.ಗಗನ (ಪ್ರ), ಎನ್.ಎಸ್.ಶ್ರಾವ್ಯಶ್ರೀ (ದ್ವಿ). ಜಾವೆಲಿನ್‌ ಥ್ರೋ: ಆರ್.ಮಿಲನ (ಪ್ರ), ಡಿ.ಎಸ್.ಕಾವ್ಯ (ದ್ವಿ). ಹ್ಯಾಮರ್‌ ಥ್ರೋ: ಭೂಮಿಕಾ (ಪ್ರ), ತನಾಜ್ (ದ್ವಿ). ಪೋಲ್‌ ವಾಲ್ಟ್‌: ರಕ್ಷಿತಾ (ಪ್ರ), ಎಚ್.ಇ.ಪುಷ್ಪ (ದ್ವಿ). 

ಬಾಲಕರು: 100 ಮೀ ಓಟ: ಎಂ.ಮಂಜುನಾಥ (ಪ್ರ), ಬರ್ಖತ್ ಅಲಿ (ದ್ವಿ). 200 ಮೀ ಓಟ: ಎಂ.ಮಂಜುನಾಥ (ಪ್ರ), ರವಿಚಂದ್ರ (ದ್ವಿ). 400 ಮೀ ಓಟ: ಸುಜಯ್ (ಪ್ರ), ಭಗತ್ (ದ್ವಿ). 800 ಮೀ ಓಟ: ಶಿವಯೋಗಯ್ಯ (ಪ್ರ), ಕೆ.ಎಂ.ವಿನೋದ್ (ದ್ವಿ). 1500 ಮೀ. ಓಟ: ಎಂ.ಎಸ್.ಸಂದೀಪ್ (ಪ್ರ), ಗುಲಾಮಿ (ದ್ವಿ). 3000 ಮೀ. ಓಟ: ಗುಲಾಮಿ (ಪ್ರ), ಛತ್ರಪತಿ ಚಂದನ್ ಎಸ್. ಜಾಧವ್ (ದ್ವಿ). 5 ಕಿ.ಮೀ ನಡಿಗೆ: ಎಸ್.ಸಾಗರ್ (ಪ್ರ), ಎಚ್.ಲಕ್ಷ್ಮಿಕಾಂತ (ದ್ವಿ).  110 ಮೀ. ಹರ್ಡಲ್ಸ್: ಎನ್.ಜೀವನ್ (ಪ್ರ), ತಿಪ್ಪೇಶ್ (ದ್ವಿ). 400 ಮೀ. ಹರ್ಡಲ್ಸ್: ಎಂ.ಯುವರಾಜ್ (ಪ್ರ), ಎಂ.ಎಸ್.ಚಂದು (ದ್ವಿ). 4X400 ಮೀ. ರಿಲೇ: ಮೋಹನ ಮತ್ತು ತಂಡ (ಪ್ರ), ಪ್ರೀತಮ್ ಮತ್ತು ತಂಡ (ದ್ವಿ). ಲಾಂಗ್‌ ಜಂಪ್‌: ಎಚ್.ಪ್ರಮೋದ್ (ಪ್ರ), ಬಿ.ಎಂ.ಭರತ್ (ದ್ವಿ). ಹೈಜಂಪ್‌: ಮಹಮದ್ ಕೈಫ್ (ಪ್ರ), ಬರ್ಖತ್ ಅಲಿ (ದ್ವಿ). ಟ್ರಿಪಲ್‌ ಜಂಪ್‌: ಸುದರ್ಶನ್ (ಪ್ರ), ಮನು (ದ್ವಿ). ಶಾಟ್‌ಪಟ್‌: ಡಿ.ಆರ್.ಯಶವಂತ (ಪ್ರ), ಆರ್.ಅಮಿತ್ (ದ್ವಿ). ಡಿಸ್ಕಸ್‌ ಥ್ರೋ: ಎಂ.ಸಿದ್ಧಿಕ್ (ಪ್ರ), ಎನ್.ಸಂದೀಪ (ದ್ವಿ). ಜಾವೆಲಿನ್‌ ಥ್ರೋ: ಸಮರ್ಥಕುಮಾರ್ (ಪ್ರ), ಆರ್.ಅಮಿತ್ (ದ್ವಿ). ಹ್ಯಾಮರ್‌ ಥ್ರೋ: ಪವನ್‌ಕುಮಾರ್ (ಪ್ರ), ಶ್ರೀನಿವಾಸ (ದ್ವಿ). ಪೋಲ್‌ ವಾಲ್ಟ್‌: ಪವನ್ ಪಿ.ನಾಯಕ್ (ಪ್ರ), ಬಿ.ಪ್ರವೀಣ್ ಕುಮಾರ್ (ದ್ವಿ). 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.