ADVERTISEMENT

ಯಥಾ ರಾಜಾ, ತಥಾ ಪ್ರಜಾ; ಯಥಾ ರಾಜಾ, ತಥಾ ಅಧಿಕಾರಿ: ಡಿ.ಕೆ. ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 4 ಜೂನ್ 2021, 15:30 IST
Last Updated 4 ಜೂನ್ 2021, 15:30 IST
ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್   

ದಾವಣಗೆರೆ: ‘ಯಥಾ ರಾಜಾ, ತಥಾ ಪ್ರಜಾ; ಯಥಾ ರಾಜಾ, ತಥಾ ಅಧಿಕಾರಿ...’

ಮೈಸೂರಿನಲ್ಲಿ ನಡೆಯುತ್ತಿರುವ ಐಎಎಸ್ ಅಧಿಕಾರಿಗಳ ನಡುವಿನ ಸಂಘರ್ಷದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾಡಿದ ವ್ಯಾಖ್ಯಾನವಿದು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಘರ್ಷಕ್ಕೆ ಸಚಿವರು ಕಾರಣ. ‘ಸಚಿವರು, ಶಾಸಕರು ಅಧಿಕಾರಕ್ಕಾಗಿ ಏನೆಲ್ಲ ಮಾಡುತ್ತಿದ್ದಾರೆ ನೀವೇ ಹೇಳಿ’ ಎಂದು ಪ್ರಶ್ನಿಸಿದರು.

ADVERTISEMENT

‘ಸಚಿವರೊಬ್ಬರು ಸಿಡಿ ಹಿಡಿದುಕೊಂಡು (ಶಾಸಕ ಯತ್ನಾಳ್ ಪ್ರಸ್ತಾಪಿಸಿದ್ದ ಸಿಡಿ) ಮೈಸೂರಿನ ಸ್ವಾಮೀಜಿ ಬಳಿ ಹೋಗಿದ್ದರಂತೆ, ಅವರು ಬೈದು ಕಳುಹಿಸಿದ್ದಾರೆ’ ಎಂದು ಸಚಿವ ಯೋಗೇಶ್ವರ್ ಹೆಸರು ಹೇಳದೇ ಕುಟುಕಿದರು.

‘18–45 ವರ್ಷದೊಳಗಿನವರಿಗೆ ಲಸಿಕೆ ನೀಡಲು ಆನ್‌ಲೈನ್ ನೋಂದಣಿಯನ್ನು ಸ್ಥಗಿತಗೊಳಿಸಿದ್ದಾರೆ. ಲಸಿಕೆ ಇಲ್ಲದಿರುವುದೇ ಇದಕ್ಕೆ ಕಾರಣ. ಇದರಲ್ಲಿ ಮುಖ್ಯಮಂತ್ರಿ ಒಬ್ಬರದ್ದೇ ತಪ್ಪಿಲ್ಲ. ಕೇಂದ್ರವೂ ಈ ವಿಚಾರದಲ್ಲಿ ವಿಫಲವಾಗಿದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.