ಮಲೇಬೆನ್ನೂರು: ಸಮೀಪದ ಕೊಮಾರನಹಳ್ಳಿ ಬಳಿ ನಕಲಿ ಬಂಗಾರ ಮಾರಾಟ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ನಲ್ಲೂರು ಕ್ಯಾಂಪಿನ ಹಡೋನಹಳ್ಳಿ ಗ್ರಾಮದ ನಿವಾಸಿ ಲಕ್ಷ್ಮಪ್ಪ ಬಂಧಿತ.
ಆರೋಪಿಯು ನಕಲಿ ಬಂಗಾರ ನೀಡಿ ಸುಧಾಕರ್ ಎಂಬವರಿಂದ ₹8 ಲಕ್ಷ ಹಣ ಪಡೆದಿದ್ದ. ಆರೋಪಿಯಿಂದ ಪೊಲೀಸರು ₹5.50 ಲಕ್ಷ ವಶಪಡಿಸಿಕೊಂಡಿದ್ದಾರೆ.
ಸಿಪಿಐ ಸುರೇಶ್ ಸಗರಿ, ಪಿಎಸ್‌ಐ ಹಾರೂನ್ ಅಖ್ತರ್, ಚಿದಾನಂದಪ್ಪ, ಎಎಸ್‌ಐ ಶ್ರೀನಿವಾಸ, ಸಿಬ್ಬಂದಿಯಾದ ಶಿವುಕುಮಾರ್, ಫೈರೋಜ್ ಖಾನ್, ವೆಂಕಟರಮಣ, ಲಕ್ಷ್ಮಣ, ವೀರೇಶಪ್ಪ, ಮಲ್ಲಿಕಾರ್ಜುನ, ಪ್ರವೀಣ್ ಪಾಟೀಲ್, ಪ್ರದೀಪ್ ಕುಮಾರ್, ವಿಜಯ್, ಅನ್ವರ್ ಅಲಿ, ಚಾಲಕರಾದ ರಾಜಪ್ಪ, ಮುರುಳೀಧರ್ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.