ADVERTISEMENT

ಪೋಡಿ ಸಮಸ್ಯೆ: ಗ್ರಾಮ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಿ- ಶಾಸಕ ಬಿ.ಪಿ.ಹರೀಶ್‌

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2024, 15:59 IST
Last Updated 17 ಸೆಪ್ಟೆಂಬರ್ 2024, 15:59 IST
ಮಲೇಬೆನ್ನೂರು ಸಮೀಪದ ಕುಣಿಬೆಳೆಕೆರೆ ಗ್ರಾಮದಲ್ಲಿ ಮಂಗಳವಾರ ಶಾಸಕ ಬಿ.ಪಿ. ಹರೀಶ್‌ ಪೋಡಿ ಮುಕ್ತ ಗ್ರಾಮ ಸಭೆಗೆ ಚಾಲನೆ ನೀಡಿದರು
ಮಲೇಬೆನ್ನೂರು ಸಮೀಪದ ಕುಣಿಬೆಳೆಕೆರೆ ಗ್ರಾಮದಲ್ಲಿ ಮಂಗಳವಾರ ಶಾಸಕ ಬಿ.ಪಿ. ಹರೀಶ್‌ ಪೋಡಿ ಮುಕ್ತ ಗ್ರಾಮ ಸಭೆಗೆ ಚಾಲನೆ ನೀಡಿದರು    

ಮಲೇಬೆನ್ನೂರು: ಸರ್ಕಾರ ರೈತರ ಅನುಕೂಲಕ್ಕಾಗಿ ಜಮೀನುಗಳ ಪೋಡಿ ಮಾಡಲು ಮುಂದಾಗಿದ್ದು, ರೈತರು ಸದುಪಯೋಗ ಪಡೆಸಿಕೊಳ್ಳಬೇಕು ಶಾಸಕ ಬಿ.ಪಿ.ಹರೀಶ್‌ ಹೇಳಿದರು.

ಹೋಬಳಿ ವ್ಯಾಪ್ತಿಯ ಕುಣಿಬೆಳೆಕೆರೆ ಗ್ರಾಮದಲ್ಲಿ ಮಂಗಳವಾರ ಪೋಡಿ ಮುಕ್ತ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸರ್ಕಾರದ ಪೋಡಿ ಮುಕ್ತ ಅಭಿಯಾನ ಮಹತ್ವಾಕಾಂಕ್ಷಿ ಯೋಜನೆ ಆಗಿದೆ. ಸರ್ವೆ ಅಧಿಕಾರಿಗಳು ಪೋಡಿ ಮಾಡುವ ವೇಳೆ ಹಿಡುವಳಿದಾರರು ಹಾಗೂ ಖಾತೆದಾರರು ಅಳತೆ, ಹೆಸರು ಕುರಿತು ಗೊಂದಲ ಮಾಡಿಕೊಂಡು ಬರಬೇಡಿ. ಆಯಾ ಗ್ರಾಮಗಳಲ್ಲಿ ಜಮೀನುಗಳ ಮಾಲೀಕತ್ವ, ಅಳತೆ, ಗಡಿ ಕುರಿತ ಸಮಸ್ಯೆ ಪರಿಹಾರ ಮಾಡಿಕೊಳ್ಳಿ’ ಎಂದು ಕಿವಿಮಾತು ಹೇಳಿದರು.

ADVERTISEMENT

ತಹಶೀಲ್ದಾರ್ ಗುರುಬಸವರಾಜ, ಉಪ ತಹಶೀಲ್ದಾರ್‌ ಆರ್‌ ರವಿ, ಭೂ ದಾಖಲೆ ಇಲಾಖೆಯ ಕಲ್ಲೇಶ್‌, ವಿಜಯ ಪ್ರಕಾಶ್, ಕಂದಾಯ ನಿರೀಕ್ಷಕ ಆನಂದ್‌, ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ್‌, ಗ್ರಾಮಸ್ಥರು ಇದ್ದರು.

ಗುಳದಹಳ್ಳಿ, ಆದಾಪುರ ಹಾಗೂ ನಂದಿತಾವರೆ ಗ್ರಾಮದಲ್ಲಿ ಪೋಡಿ ಮುಕ್ತ ಗ್ರಾಮ ಸಭೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ಜರುಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.