ADVERTISEMENT

ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿ: ಕೆ.ಎಸ್. ಅಶ್ವಿನಿ ಸಲಹೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 4:58 IST
Last Updated 19 ಸೆಪ್ಟೆಂಬರ್ 2021, 4:58 IST
ದಾವಣಗೆರೆಯ ರೋಟರಿ ಭವನದಲ್ಲಿ ಆಯೋಜಿಸಿದ್ದ ಆಲ್‌ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ 2ನೇ ಜಿಲ್ಲಾ ಮಟ್ಟದ ವಿದ್ಯಾರ್ಥಿ ಸಮ್ಮೇಳನವನ್ನು ಎಐಡಿಎಸ್‌ಒ ರಾಜ್ಯ ಘಟಕದ ಅಧ್ಯಕ್ಷೆ ಕೆ.ಎಸ್. ಅಶ್ವಿನಿ ಅವರು ನೇತಾಜಿ ಸುಭಾಷ್‌ಚಂದ್ರ ಬೋಸ್‌ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಿದರು. ರಾಜ್ಯ ಕಾರ್ಯದರ್ಶಿ ಅಜಯ್‌ ಕಾಮತ್, ಜಿಲ್ಲಾ ಕಾರ್ಯದರ್ಶಿ ಪೂಜಾ ನಂದಿಹಳ್ಳಿ, ನಾಗಜ್ಯೋತಿ, ಸೌಮ್ಯ, ಪುಷ್ಪಾ ಅವರು ಇದ್ದಾರೆ –ಪ್ರಜಾವಾಣಿ ಚಿತ್ರ

ದಾವಣಗೆರೆ: ವಿದ್ಯಾರ್ಥಿಗಳು ಭ್ರಷ್ಟಾಚಾರ, ಅಕ್ರಮ, ಅನ್ಯಾಯಗಳನ್ನು ಕಂಡು ರಾಜಿ ಮಾಡಿಕೊಳ್ಳದೇ ಧ್ವನಿ ಎತ್ತುವ ಕೆಲಸ ಮಾಡಬೇಕು ಎಂದು ಎಐಡಿಎಸ್‍ಒ ರಾಜ್ಯ ಘಟಕದ ಅಧ್ಯಕ್ಷೆ ಕೆ.ಎಸ್. ಅಶ್ವಿನಿ ಸಲಹೆ ನೀಡಿದರು.

ಎಐಡಿಎಸ್‍ಒ ವತಿಯಿಂದನಗರದ ರೋಟರಿ ಬಾಲಭವನದಲ್ಲಿ ಶನಿವಾರ ನಡೆದ 2ನೇ ಜಿಲ್ಲಾ ವಿದ್ಯಾರ್ಥಿ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಶಿಕ್ಷಣ ಎಂದರೆ ಜ್ಞಾನ. ಜ್ಞಾನ ಪಡೆದವರೇ ಸಮಾಜದಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ ದನಿ ಎತ್ತದೆ ಹೋದರೆ ಅದು ಹೆಚ್ಚಾಗುತ್ತಲೇ ಹೋಗುತ್ತದೆ. ವಿದ್ಯಾರ್ಥಿಗಳು ಸಮೂಹವನ್ನು ರಚಿಸಿಕೊಂಡು ಹೋರಾಟಕ್ಕಿಳಿಯಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಎ.ಐ.ಡಿ.ಎಸ್.ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಮಾತನಾಡಿ, ‘ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಹಾಸ್ಟೆಲ್‍ಗಳಲ್ಲಿ ಮೂಲ ಸೌಕರ್ಯಗಳು, ವಿದ್ಯಾರ್ಥಿ ವೇತನ ಸೇರಿ ಹತ್ತು ಹಲವು ಬೇಡಿಕೆಗಳಿಗೆ ಆಗ್ರಹಿಸಿ ಸಂಘಟನೆಯಿಂದ ಯಶಸ್ವಿ ಹೋರಾಟಗಳು ನಡೆದಿವೆ. ಆದರೆ ಇಂದು ವಿದ್ಯಾರ್ಥಿಗಳಲ್ಲಿ ಪ್ರಶ್ನೆ ಮಾಡುವ ಮನಸ್ಥಿತಿ ಕೊರತೆ ಇದೆ. ಧೈರ್ಯವಾಗಿ ಪ್ರಶ್ನೆ ಮಾಡುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಎಸ್‍ಯುಸಿಐ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಸುನಿತ್‍ಕುಮಾರ್ ಮಾತನಾಡಿ, ‘ಶಿಕ್ಷಣದಿಂದ ಮನುಷ್ಯ ಜ್ಞಾನ ಪಡೆದರೆ ಬದುಕು ಸುಲಲಿತವಾಗಲಿದೆ. ನಮಗೆ ವೇದ, ಪುರಾಣ, ಬೈಬಲ್, ಕುರಾನ್‍ಗಳಲ್ಲಿ ಏನು ಹೇಳಲಾಗಿದೆ ಎನ್ನುವುದು ಬೇಕಿಲ್ಲ. ಪ್ರಜಾಸತ್ತಾತ್ಮಕ, ಧರ್ಮನಿರಪೇಕ್ಷ ಶಿಕ್ಷಣ ಬೇಕು’ ಎಂದರು.

ಎಐಡಿಎಸ್ಒನ ಪೂಜಾ ವರದಿ ಮಂಡಿಸಿದರು.ಅಧ್ಯಕ್ಷೀಯ ಮಂಡಳಿಯಲ್ಲಿ ಸೌಮ್ಯ, ನಾಗಜ್ಯೋತಿ ಹಾಗೂ ಪುಷ್ಪಾ ಇದ್ದರು. ಇದೇ ವೇಳೆ ಎಐಡಿಎಸ್ಒ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಕಿರಣ್.ಎಂ., ಕಾರ್ಯದರ್ಶಿಯಾಗಿ ಪೂಜಾ.ಎನ್., ಸೆಕ್ರೆಟೇರಿಯಟ್ ಸದಸ್ಯರಾಗಿ ಪುಷ್ಪ, ಸುಮನ್, ಅಭಿಷೇಕ್ ಹಾಗೂ ಕಚೇರಿ ಕಾರ್ಯದರ್ಶಿಯಾಗಿ ಕಾವ್ಯಾ ಆಯ್ಕೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.