
ಪ್ರಜಾವಾಣಿ ವಾರ್ತೆ
ಸಾಂದರ್ಭಿಕ ಚಿತ್ರ
ದಾವಣಗೆರೆ: ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಕೊಡಿಸುವುದಾಗಿ ನಂಬಿಸಿದ ವ್ಯಕ್ತಿಯೊಬ್ಬ ನಗರದ ವೈದ್ಯರೊಬ್ಬರಿಗೆ ₹15,92,652 ಗಳನ್ನು ವಂಚಿಸಿದ್ದಾನೆ.
ಇಲ್ಲಿನ ಶಕ್ತಿನಗರದ ಗೌತಮ್ ಎಂಬುವವರೇ ಮೋಸ ಹೋದವರು. ಅಪರಿಚಿತ ವ್ಯಕ್ತಿಯು ಗೌತಮ್ ಅವರಿಗೆ ಒಂದು ಲಿಂಕ್ ಹಾಗೂ ಐಡಿಯನ್ನು ಕಳುಹಿಸಿ ಅದಕ್ಕೆ ಹಣ ಹಾಕುವಂತೆ ಸೂಚಿಸಿದ. ಆ ಬಳಿಕ ಹಣ ಹಾಕುತ್ತಿದ್ದಂತೆ ಅದಕ್ಕೆ ಲಾಭಾಂಶ ತೋರಿಸಿತು. ಇದನ್ನು ನಂಬಿದ ಗೌತಮ್ ಅಪರಿಚಿತ ವ್ಯಕ್ತಿ ಹೇಳಿದಂತೆ ಒಟ್ಟು ₹15 ಲಕ್ಷದಷ್ಟು ಹಣವನ್ನು ಆತನ ಖಾತೆಗೆ ಜಮಾ ಮಾಡಿದ್ದಾರೆ. ಆದರೆ ಹಣವನ್ನು ವಾಪಸ್ ಕೊಡಲು ಹೇಳಿದಾಗ, ಶೇ 40ರಷ್ಟು ಹಣ (₹ 7ಲಕ್ಷ) ಹಣ ಹಾಕಿದರೆ ಲಿಂಕ್ ತೆಗೆಯುತ್ತೇವೆ ಎಂದಾಗ ಮೋಸ ಮಾಡಿರುವುದು ಗೊತ್ತಾಗಿದೆ. ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.