ADVERTISEMENT

ಐರ್ಲೆಂಡ್ ಕನ್ನಡಿಗರಿಗೆ ಸ್ವಾತಂತ್ರ್ಯದ ಕಥೆ

ಕೆ.ಎಸ್.ವೀರೇಶ್ ಪ್ರಸಾದ್
Published 17 ಆಗಸ್ಟ್ 2021, 1:49 IST
Last Updated 17 ಆಗಸ್ಟ್ 2021, 1:49 IST
ಐರ್ಲೆಂಡ್‌ನಲ್ಲಿರುವ ಕನ್ನಡಿಗರ ಮಕ್ಕಳಿಗೆ ಬಂಟ್ವಾಳದ ಶಿವಾನಂದ್‌ ಅವರು ಆನ್‌ಲೈನ್‌ ಮೂಲಕ ಸ್ವಾತಂತ್ರ್ಯದ ಕಥೆ ಹೇಳಿದರು.
ಐರ್ಲೆಂಡ್‌ನಲ್ಲಿರುವ ಕನ್ನಡಿಗರ ಮಕ್ಕಳಿಗೆ ಬಂಟ್ವಾಳದ ಶಿವಾನಂದ್‌ ಅವರು ಆನ್‌ಲೈನ್‌ ಮೂಲಕ ಸ್ವಾತಂತ್ರ್ಯದ ಕಥೆ ಹೇಳಿದರು.   

ಸಂತೇಬೆನ್ನೂರು: ಡಬ್ಲಿನ್‌ ನಗರದಲ್ಲಿರುವ ಕನ್ನಡಿಗರು ಐರ್ಲೆಂಡ್‌ನಲ್ಲಿರುವ ಕನ್ನಡಿಗರ ಮಕ್ಕಳಿಗೆ ಆನ್‌ಲೈನ್‌ನಲ್ಲಿ ಅನಿಮೇಷನ್ ಮೂಲಕ ಸ್ವಾತಂತ್ರ್ಯ ಹೋರಾಟದ ಕಥೆಗಳನ್ನು ಹೇಳುವ ಮೂಲಕ ರಾಷ್ಟ್ರಪ್ರೇಮ ಮೆರೆದಿದ್ದಾರೆ.

ಬಂಟ್ವಾಳದ ಹೆಸರಾಂತ ಚಿತ್ರಕಾರ ಶಿವಾನಂದ್ ಅವರು ವರ್ಚುವಲ್‌ ಮೀಟಿಂಗ್‌ನಲ್ಲಿ ಭಾಗವಹಿಸಿ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದ ಪರಿಯನ್ನು ವಿವರಿಸಿದರು ಎಂದು ಡಬ್ಲಿನ್‌ನಲ್ಲಿ ನೆಲೆಸಿರುವ ಇಲ್ಲಿನತಣಿಗೆರೆ ಗ್ರಾಮದ ಸಾಫ್ಟ್‌ವೇರ್ ಎಂಜಿನಿಯರ್ ಕಾಂತೇಶ್ ಮಾಹಿತಿ ನೀಡಿದ್ದಾರೆ.

ಕೋವಿಡ್‌ನಿಂದಾಗಿ ಕನ್ನಡ ಕಲಿಕೆಯ ತರಗತಿಗಳಿಗೆ ಹಿನ್ನಡೆ ಉಂಟಾಗಿತ್ತು. ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಕಲಿಕೆಗೆ ವಿಶೇಷ ರೀತಿಯಲ್ಲಿ ಮತ್ತೆ ಚಾಲನೆ ನೀಡಲಾಯಿತು ಎಂದು ಅವರು ವಿವರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.