ADVERTISEMENT

ನಾಯಿ ದಾಳಿಯಿಂದ ರೇಬಿಸ್: ನಾಲ್ಕು ತಿಂಗಳಿಂದ‌ ಆಸ್ಪತ್ರೆಯಲ್ಲಿದ್ದ ಬಾಲಕಿ ಸಾವು

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 11:26 IST
Last Updated 18 ಆಗಸ್ಟ್ 2025, 11:26 IST
<div class="paragraphs"><p>ಬೀದಿ ನಾಯಿಗಳು (ಪ್ರಾತಿನಿಧಿಕ ಚಿತ್ರ) ಮತ್ತು&nbsp;ಖದೀರಾ ಬಾನು</p></div>

ಬೀದಿ ನಾಯಿಗಳು (ಪ್ರಾತಿನಿಧಿಕ ಚಿತ್ರ) ಮತ್ತು ಖದೀರಾ ಬಾನು

   

ದಾವಣಗೆರೆ: ಬೀದಿ ನಾಯಿ ಕಚ್ಚಿ ಗಾಯಗೊಂಡು ನಾಲ್ಕು ತಿಂಗಳಿಂದ‌ ಆಸ್ಪತ್ರೆಯಲ್ಲಿದ್ದ ಬಾಲಕಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದೆ.

ನಗರದ ಶಾಸ್ತ್ರಿ ಬಡಾವಣೆಯ ಖದೀರಾ ಬಾನು (4) ಮೃತ ಬಾಲಕಿ. ನಾಯಿ ಕಚ್ಚಿದ್ದರಿಂದ ರೇಬಿಸ್ ಖಾಯಿಲೆ ಕಾಣಿಸಿಕೊಂಡು ಬಾಲಕಿ ಮೃತಪಟ್ಟಿದೆ.

ADVERTISEMENT

ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದ ಬಾಲಕಿಯ ಮೇಲೆ ಬೀದಿ ನಾಯಿ ದಾಳಿ ನಡೆಸಿತ್ತು. ಮುಖ ಸೇರಿದಂತೆ ದೇಹದ ಹಲವು ಭಾಗಗಳನ್ನು ಕಚ್ಚಿ ಗಾಯಗೊಳಿಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯನ್ನು‌ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಭಾನುವಾರ ರಾತ್ರಿ ಮೃತಪಟ್ಟಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.