ಬಂಧನ
(ಪ್ರಾತಿನಿಧಿಕ ಚಿತ್ರ)
ದಾವಣಗೆರೆ: ಎರಡು ಪ್ರತ್ಯೇಕ ಅಪರಾಧ ಪ್ರಕರಣಗಳ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಒಟ್ಟು ₹12,28,000 ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಚನ್ನಗಿರಿ ತಾಲ್ಲೂಕಿನ ಚಿರಡೋಣಿ ಗ್ರಾಮದ ಶಿವಮೂರ್ತಿ ಅಲಿಯಾಸ್ ಮುರುಡ, ರಮೇಶ್ ಅಲಿಯಾಸ್ ಗಿಡ್ಡ ರಾಮ ಹಾಗೂ ರುದ್ರೇಶ ಬಂಧಿತರು. ಕೃತ್ಯಕ್ಕೆ ಬಳಸಿದ್ದ ಆಯುಧಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಇದೇ ಏಪ್ರಿಲ್ 27ರಂದು ಚಿರಡೋಣಿ ಕ್ಯಾಂಪ್‌ನ ಹಂಸತಾರಕಂ ಅವರ ಮನೆಯ ಬೀಗ ಒಡೆದು ಮನೆಯ ಬೀರುವಿನಲ್ಲಿ ಇಟ್ಟಿದ್ದ ಬೆಳ್ಳಿ, ಬಂಗಾರದ ಆಭರಣ ಹಾಗೂ ನಗದು ಹಣವನ್ನು ಆರೋಪಿಗಳು ಕಳವು ಮಾಡಿದ್ದರು.
ಆಗಸ್ಟ್ 14ರಂದು ಚಿರಡೋಣಿ ಕ್ಯಾಂಪ್‌ನ ಸುಮಲತಾ ಅವರ ಮನೆಗೆ ಆಯುಧಗಳೊಂದಿಗೆ ನುಗ್ಗಿದ್ದ ಆರೋಪಿಗಳು, ಮನೆಯ ಸದಸ್ಯರ ಮೇಲೆ ಹಲ್ಲೆ ನಡೆಸಿ 2 ಬಂಗಾರದ ಮಾಂಗಲ್ಯ ಸರಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು.
ಈ ಎರಡೂ ಘಟನೆಗಳ ಬಗ್ಗೆ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು.
ಸಿಪಿಐ ಲಿಂಗನಗೌಡ ನೆಗಳೂರು, ಇನ್‌ಸ್ಪೆಕ್ಟರ್ ಇಸ್ಮಾಯಿಲ್, ಪಿಎಸ್ಐಗಳಾದ ಮಂಜುನಾಥ್, ಇಮ್ತಿಯಾಜ್, ಜಗದೀಶ್ ಮತ್ತು ಸಿಬ್ಬಂದಿ ರುದ್ರೇಶ್, ವೀರಭದ್ರಪ್ಪ, ಅಂಜಿನಪ್ಪ, ರಾಘವೇಂದ್ರ, ರವೀಂದ್ರ, ಧರ್ಮಪ್ಪ, ರವಿ, ಬಾಲರಾಜ್, ಇಬ್ರಾಹಿಂ, ಅಣ್ಣೇಶ, ಪರಶುರಾಮ, ತಿಮ್ಮರಾಜು, ಶಿವರಾಜ್, ಆನಂದ್, ಹೇಮ್ಲನಾಯ್ಕ, ಚನ್ನಕೇಶವ, ಮೋಹನ್ ಹಾಗೂ ಇನ್ನಿತರರು ಕಾರ್ಯಾಚರಣೆ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.