ADVERTISEMENT

ಸರ್ಕಾರಿ ಶಾಲೆಗೆ ಪ್ರವೇಶ ಪಡೆದವರಿಗೆ ₹500 ಠೇವಣಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2019, 20:15 IST
Last Updated 18 ಆಗಸ್ಟ್ 2019, 20:15 IST
ನ್ಯಾಮತಿ ತಾಲ್ಲೂಕು ಆರುಂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ನೇ ತರಗತಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಸ್ತ್ರೀಶಕ್ತಿ ಸಂಘಟನೆಗಳು ₹ 500 ಮೊತ್ತದ ಠೇವಣಿ ಬಾಂಡ್‌ಗಳನ್ನು ಈಚೆಗೆ ವಿತರಿಸಿದವು
ನ್ಯಾಮತಿ ತಾಲ್ಲೂಕು ಆರುಂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ನೇ ತರಗತಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಸ್ತ್ರೀಶಕ್ತಿ ಸಂಘಟನೆಗಳು ₹ 500 ಮೊತ್ತದ ಠೇವಣಿ ಬಾಂಡ್‌ಗಳನ್ನು ಈಚೆಗೆ ವಿತರಿಸಿದವು   

ನ್ಯಾಮತಿ: ಗ್ರಾಮದ ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ 1ನೇ ತರಗತಿಗೆ ಪ್ರವೇಶ ಪಡೆದ ಪ್ರತಿ ಮಗುವಿಗೂ ಪ್ರೋತ್ಸಾಹಧನವಾಗಿ ₹ 500 ಠೇವಣಿ ಇಡುವ ಯೋಜನೆಗೆ ಸಮೀಪದ ಆರುಂಡಿ ಗ್ರಾಮದ ಮಹಿಳಾ ಸಂಘಟನೆಗಳು ಮುಂದಾಗಿವೆ.

ಶಾಲೆಯಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಎಂ.ಶಿವರಾಜು, ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದನ್ನು ತಪ್ಪಿಸಲು ಪ್ರಿಯದರ್ಶಿನಿ, ನಂದಿನಿ, ಹಳದಮ್ಮದೇವಿ, ಗಂಗಾಪರಮೇಶ್ವರಿ, ವೀರಭದ್ರೇಶ್ವರ ಸ್ತ್ರೀಶಕ್ತಿ ಹಾಗೂ ಎ.ಜಿ. ಶಾರದಮ್ಮ ಅವರು ಸಂಘಟಿತರಾಗಿ 1ನೇ ತರಗತಿ ಪ್ರವೇಶ ಪಡೆದ 12 ಮಕ್ಕಳ ಹೆಸರಿನಲ್ಲಿ 7 ವರ್ಷಗಳ ಅವಧಿಗೆ ₹ 500 ಠೇವಣಿ ಇಟ್ಟು, ಸಂಬಂಧಿಸಿದ ಬಾಂಡ್‌ ಅನ್ನು ವಿದ್ಯಾರ್ಥಿಗಳಿಗೆ ವಿತರಿಸಿದ್ದಾರೆ ಎಂದು ತಿಳಿಸಿದರು.

ಮಾಜಿ ಸೈನಿಕ ದ್ವಾರಕೀಶ, ನಿವೃತ್ತ ಶಿಕ್ಷಕ ಎ. ಹಾಲಪ್ಪ, ಲೋಕೇಶಪ್ಪ ವೈಯಕ್ತಿಕವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.