ಸಂಘದ ಸದಸ್ಯರಾದ ರಂಗನಾಥ ಎ.ಕೆ. (ಮಚ್ಚಿರಂಗ), ಕುಂಕುವ ಸುನಿಲ್, ನರಸಿಂಹಸ್ವಾಮಿ, ಜ್ಯೋತಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಎಚ್.ಗೋಪಗೊಂಡನಹಳ್ಳಿ ಗ್ರಾಮದ ಎಂ.ಕೋಮಲ ಅವರು, ‘ತಮ್ಮ ಪತಿ ಎ.ಕೆ.ಸಂತೋಷ ಅವರಿಗೆ ಮಾನಸಿಕವಾಗಿ ಹಿಂಸಿಸುತ್ತಾ, ಹಣಕ್ಕೆ ಬೇಡಿಕೆ ಇಟ್ಟು ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ. ಜಮೀನಿಗೆ ಸಂಬಂಧಿಸಿದಂತೆ ಲೆಕ್ಕವನ್ನು ಕೊಡು ಎಂದು ಬಲವಂತ ಮಾಡುತ್ತಿದ್ದು, ಇದರಿಂದ ನನ್ನ ಗಂಡನ ಆರೋಗ್ಯದಲ್ಲಿ ಏರುಪೇರಾಗದೆ ನಮ್ಮ ಕುಟುಂಬಕ್ಕೆ ರಕ್ಷಣೆ ನೀಡಿ, ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ’ ದೂರು ನೀಡಿದ್ದಾರೆ.
ಇದೇ ಆರೋಪಿಗಳ ಮೇಲೆ ಚಿನ್ನಿಕಟ್ಟೆ ಗ್ರಾಮದ ಎ.ಕೆ.ಜಯಮ್ಮ ಪ್ರತ್ಯೇಕ ದೂರು ನೀಡಿ, ‘ನನ್ನ ಮಗ ನರಸಿಂಹಸ್ವಾಮಿ ಮತ್ತು ಸೊಸೆ ಬಿ.ಎನ್.ಜ್ಯೋತಿ ಅವರಿಗೆ ನನ್ನ ವಿರುದ್ಧ ಪ್ರಚೋದನೆ ಮಾಡಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸಿ ನನ್ನನ್ನು ಮನೆಯಿಂದ ಹೊರ ಹಾಕುವಂತೆ ಪ್ರಚೋದಿಸುತ್ತಿದ್ದಾರೆ. ನನ್ನ ಸ್ವಂತ ಅಕ್ಕನ ಮಗ ಎ.ಕೆ.ಸಂತೋಷ ನಮ್ಮ ಮನೆಯ ಜವಾಬ್ದಾರಿ ವಹಿಸಿಕೊಂಡಿದ್ದು ಅವನಿಗೂ ಸಹಾ ಎಎಸ್‌ಎಸ್‌ಕೆ ಕಚೇರಿಗೆ ಬಂದು ಲೆಕ್ಕ ಕೊಡುವಂತೆ ಬೆದರಿಕೆ ಹಾಕುತ್ತಿದ್ದಾರೆ. ನನಗೂ ಮತ್ತು ನನ್ನ ಅಕ್ಕನ ಮಗನಿಗೂ ರಕ್ಷಣೆ ಕೊಡುವಂತೆ’ ದೂರು ನೀಡಿದ್ದಾರೆ.
ಸಬ್ ಇನ್‌ಸ್ಪೆಕ್ಟರ್ ಎನ್.ಎಸ್.ರವಿ ಮಾರ್ಗದರ್ಶನದಲ್ಲಿ ವಿಚಾರಣೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.