
ಹರಿಹರ: ಗದಗ ಜಿಲ್ಲೆಯ ಮುಂಡರಗಿಯ ಅನ್ನದಾನೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಈಚೆಗೆ ನಡೆದ 18ನೇ ರಾಜ್ಯಮಟ್ಟದ ಚಾಂಪಿಯನ್‌ಶಿಪ್ ಕ್ರೀಡಾಕೂಟದಲ್ಲಿ ಹರಿಹರದ ಸ್ಕ್ವಾಯ್ ಮಾರ್ಷಲ್ ಆರ್ಟ್ಸ್ ಅಕಾಡೆಮಿಯ ತಂಡ ಪ್ರಥಮ ರನ್ನರ್ ಅಪ್ ಟ್ರೋಫಿ ಗಳಿಸಿದೆ.
ಸ್ಪರ್ಧೆಯಲ್ಲಿ ಈ ತಂಡದ ಕ್ರೀಡಾಪಟುಗಳು ಒಟ್ಟು 32 ಚಿನ್ನ, 6 ಬೆಳ್ಳಿ ಮತ್ತು 2 ಕಂಚಿನ ಪದಕಗಳನ್ನು ಪಡೆದು ಹೈದರಾಬಾದ್‌ನ ಗಚ್ಚಿ ಬೌಲಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ 26ನೇ ರಾಷ್ಟ್ರೀಯ ಸ್ಕ್ವಾಯ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಚಿನ್ನದ ಪದಕ ಪಡೆದವರು: ಬಾಲಕ ಮತ್ತು ಬಾಲಕಿಯರ ವಯಸ್ಸು ಹಾಗೂ ಭಾರದ ಆಧಾರದ ವಿವಿಧ ವಿಭಾಗಗಳ ಸ್ಪರ್ಧೆಯಲ್ಲಿ ಮೊಹಮ್ಮದ್ ಜೈನ್ ಎಚ್, ಮೊಹಮ್ಮದ್ ನವಾಜ್, ಮೊಹಮ್ಮದ್ ಆದಿಯಾನ್, ಮೊಹಮ್ಮದ್ ಸಗೈರ್ ಟೋಪಿನ್‌ಕಟ್ಟಿ, ಸಗೈರ್, ನವಾಜ್ ಮತ್ತು ಅವ್ಯುಕ್ತ್ ಜಿ.ಎ. ಅವರನ್ನೊಳಗೊಂಡ ಖವಾಂಕಿ ಗ್ರೂಪ್ ಚಿನ್ನ ಗಳಿಸಿದೆ.
11 ವರ್ಷದೊಳಗಿನ ಬಾಲಕರ ವಿಭಾಗ ಮತ್ತು ಏರೋಸ್ಕ್ವಾಯ್ ವೈಯಕ್ತಿಕ ವಿಭಾಗದಲ್ಲಿ ಸುಧೀಕ್ಷಾ, ಅವ್ಯುಕ್ತ್ ಜಿ.ಎ. ಜೋಡಿ ಮಿಶ್ರ ಡಬಲ್ಸ್‌ನಲ್ಲಿ ಚಿನ್ನದ ಪದಕವನ್ನು ಪಡೆದರು. 14 ವರ್ಷದೊಳಗಿನವರ ವಿಭಾಗದಲ್ಲಿ ಅಮಾನ್ ಎಂ.ಎ, ಸೈಯದ್ ಅಯಾನ್, ಅನೀಶ್ ಕುಮಾರ್, ಅರ್ಬಾಜ್ ಚಿನ್ನದ ಪದಕ ಪಡೆದರು.
14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಮಧೀಹಾ ತಾಜ್, ಜಿಯಾ ಮತ್ತು ವೈಷ್ಣವಿ, ಅನೀಶ್ ಕುಮಾರ್, ಮಹೀನ್, ಅಮಾನ್ ಚಿನ್ನ ಗೆದ್ದರು.
18 ವರ್ಷ ಮೇಲ್ಪಟ್ಟ ಮಹಿಳಾ ವಿಭಾಗದಲ್ಲಿ ನಿಶಾತ್ ಅಂಜುಮ್, ಫಾಕಿಹಾ ಕೌನೈನ್, ತರಬೇತುದಾರ ಆಯಿಷಾ ಫರ್ಹೀನ್, ಅಂಜುಮ್ ಬಾನು, ಚಿನ್ನ ಗೆದ್ದಿದ್ದಾರೆ.
18 ವರ್ಷಕ್ಕಿಂತ ಮೇಲ್ಪಟ್ಟ ಪುರುಷರ ವಿಭಾಗದಲ್ಲಿ ಸೈಯದ್ ಜುಹೈಬ್, ವೀರೇಶ್, ತರಬೇತುದಾರ ಸೈಯದ್ ಶೋಯೆಬ್ ಚಿನ್ನದ ಪದಕ ಗೆದ್ದಿದ್ದಾರೆ.
ಕ್ರೀಡಾಪಟುಗಳ ಈ ಸಾಧನೆಗೆ ಶಾಸಕ ಬಿ.ಪಿ.ಹರೀಶ್, ಕರ್ನಾಟಕ ಸ್ಕ್ವಾಯ್ ಅಸೋಸಿಯೇಷನ್‌ನ ಅಧ್ಯಕ್ಷ ಗಿರೀಶ್ ಕೆ.ಬಿ, ಸಂಸ್ಥಾಪಕ ಅಧ್ಯಕ್ಷ ರವಿಕುಮಾರ್ ಜಿ.ವಿ, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಅಲಿ ಎಚ್.ಯು, ಹಿರಿಯ ತರಬೇತುದಾರರಾದ ಆಯಿಷಾ ಫರ್ಹೀನ್, ಸೈಯದ್ ಶೋಯೆಬ್ ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.