
ಹರಿಹರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾರ್ಮಿಕ ಕಾನೂನುಗಳನ್ನು ಖಂಡಿಸಿ ಹಾಗೂ ಮನರೇಗಾ ಯೋಜನೆ ಜಾರಿಗೆ ಆಗ್ರಹಿಸಿ ಗುರುವಾರ ವಿವಿಧ ಸಂಘಟನೆಗಳ ಕಾರ್ಮಿಕರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಫಕ್ಕೀರಸ್ವಾಮಿ ಮಠದಿಂದ ಶಿವಮೊಗ್ಗ ರಸ್ತೆಯ ಮೂಲಕ ಮೆರವಣಿಗೆಯಲ್ಲಿ ಆಗಮಿಸಿದ ಪ್ರತಿಭಟನಕಾರರು ಗಾಂಧಿ ವೃತ್ತದಲ್ಲಿ ಕೆಲ ಸಮಯ ಗುಂಪುಗೂಡಿ ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರುದ್ಧ ಘೋಷಣೆ ಕೂಗಿದರು. ನಂತರ ತಹಶೀಲ್ದಾರ್ ಸಂತೋಷ್ ಕುಮಾರ್ ಜಿ. ಅವರಿಗೆ ಮನವಿ ನೀಡಲಾಯಿತು.
ನಾಲ್ಕು ಕಾರ್ಮಿಕ ಸಂಹಿತೆ ಕುರಿತಂತೆ ಕರ್ನಾಟಕ ಸರ್ಕಾರ ನಿಯಮಾವಳಿ ರಚಿಸಬಾರದು. ರಾಜ್ಯದಲ್ಲಿ ಕನಿಷ್ಠ ಮಾಸಿಕ ವೇತನವನ್ನು ₹41,000ಕ್ಕೆ ಪರಿಷ್ಕರಿಸಬೇಕು ಎಂದು ಒತ್ತಾಯಿಸಿದರು.
ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಎಚ್.ಕೆ.ಕೊಟ್ರಪ್ಪ, ಹನುಮಗೌಡ್ರು ಬಿ.ಸಿ., ಮುದಿ ಮಲ್ಲನಗೌಡ ಕೆ., ಕೊಟ್ರೇಶ್ ಓಲೆಕಾರ್, ರಮೇಶ್ ಮಾನೆ, ಪ್ರೀತಮ್ ಬಾಬು, ಡಿ.ಹನುಮಂತಪ್ಪ, ಭೀಮಣ್ಣ, ಮೊಹ್ಮದ್ ಅಶ್ಫಾಖ್, ಎಸ್.ಗೋವಿಂದ, ಆನಂದ್, ಬಿ.ಮಗ್ದುಮ್, ಸಂಜಯ್ ಜೆ., ಇಮ್ತಿಯಾಜ್ ಜಲಾಲ್, ಸೈಯದ್ ಯೂಸುಫ್, ಅಬು ಸ್ವಾಲೇಹಾ, ಮಂಜಮ್ಮ ಡಿ., ಅಲಿ ಅಕ್ಬರ್, ರೇಷ್ಮಾ ಬಾನು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.