ನ್ಯಾಮತಿ: ಪಟ್ಟಣದ ಆರುಂಡಿ-ನ್ಯಾಮತಿ ರಸ್ತೆಯ ದೇವೇಂದ್ರಪ್ಪ ಸರ್ಕಲ್ ಬಳಿಯ ತಿರುವಿನಲ್ಲಿ ರಸ್ತೆಯ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಕಂಕನಹಳ್ಳಿ ತಾಂಡಾದ ರವಿನಾಯ್ಕ (25) ಮಂಗಳವಾರ ಮೃತಪಟ್ಟಿದ್ದಾರೆ.
ರವಿನಾಯ್ಕ ಅವರು ಹೊನ್ನಾಳಿಯಲ್ಲಿರುವ ಕೋಳಿ ಅಂಗಡಿಯಲ್ಲಿ ಕೆಲಸ ಮುಗಿಸಿಕೊಂಡು ಶಿಕಾರಿಪುರದ ವಿನೋದರಾಜ ಮತ್ತು ಕಂಕನಹಳ್ಳಿ ತಾಂಡಾದ ಮಂಜನಾಯ್ಕ ಅವರೊಂದಿಗೆ ನ್ಯಾಮತಿಗೆ ಬರುತ್ತಿರುವಾಗ ಮುಂದಿನ ಬೈಕ್ ಅನ್ನು ಹಿಂದಿಕ್ಕಲು ವೇಗವಾಗಿ ಬೈಕ್ ಚಲಾಯಿಸಿದ್ದಾರೆ. ಈ ವೇಳೆ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದರಿಂದ ರವಿನಾಯ್ಕ ಅವರ ತಲೆ, ಮೈಕೆಗೆ ಬಲವಾದ ಪೆಟ್ಟು ಬಿದ್ದಿದೆ. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಬೈಕ್ ಹಿಂಬದಿಯಲ್ಲಿ ಕುಳಿತಿದ್ದ ಇಬ್ಬರು ಸವಾರರ ಪೈಕಿ ಮಂಜನಾಯ್ಕ ಅವರ ತಲೆ, ಮೈ, ಕೈಗೆ ಪೆಟ್ಟಾಗಿದೆ. ವಿನೋದರಾಜ ಅವರಿಗೆ ತರಚು ಗಾಯಗಳಾಗಿವೆ. ಈ ಸಂಬಂಧ ನ್ಯಾಮತಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.