ADVERTISEMENT

‘ಹಿಂದುಳಿದ ವರ್ಗಗಳ ಎಲ್ಲರೂ ಸಮೀಕ್ಷೆ ಪಾಲ್ಗೊಳ್ಳಿ’

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 5:13 IST
Last Updated 18 ಸೆಪ್ಟೆಂಬರ್ 2025, 5:13 IST
ಹೊನ್ನಾಳಿಯಲ್ಲಿ ಅವಳಿ ತಾಲ್ಲೂಕು ಹಿಂದುಳಿದ ವರ್ಗಗಳ ಸಮಾಜದ ಮುಖಂಡರು ಸಭೆ ನಡೆಸಿದರು 
ಹೊನ್ನಾಳಿಯಲ್ಲಿ ಅವಳಿ ತಾಲ್ಲೂಕು ಹಿಂದುಳಿದ ವರ್ಗಗಳ ಸಮಾಜದ ಮುಖಂಡರು ಸಭೆ ನಡೆಸಿದರು    

ಹೊನ್ನಾಳಿ: ‘ರಾಜ್ಯ ಸರ್ಕಾರ ಸೆ. 22ರಿಂದ ಜಾತಿ ಗಣತಿ ಕೈಗೊಂಡಿದ್ದು, ಹಿಂದುಳಿದ ವರ್ಗಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ 102 ಜಾತಿಗಳ ಜನರು ಈ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು’ ಎಂದು ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಎ. ಉಮಾಪತಿ ಹೇಳಿದರು.

102 ಜಾತಿಗಳ ಸಮಾಜದ ಮುಖಂಡರು ಜಾತಿ ಕಾಲಂನಲ್ಲಿ ತಮ್ಮ ಜಾತಿಗಳನ್ನು ಬರೆಸಬೇಕು. ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಸಬೇಕು ಎಂದು ಮಂಗಳವಾರ ಪಟ್ಟಣದಲ್ಲಿ ನಡೆದ ಸಭೆಯಲ್ಲಿ ಅವರು ಮನವಿ ಮಾಡಿದರು.

‘ಈ ಸಮೀಕ್ಷೆಯಿಂದ ಯಾವ್ಯಾವ ಜಾತಿಗಳು ಎಷ್ಟು ಸಂಖ್ಯೆಯಲ್ಲಿದ್ದಾರೆ ಎಂದು ತಿಳಿದುಬರಲಿದ್ದು, ಈ ಜಾತಿಗಳ ಮಕ್ಕಳ ಭವಿಷ್ಯಕ್ಕೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಳ್ಳಲು ಅನುಕೂಲವಾಗಲಿದೆ. ಜೊತೆಗೆ ಹಿಂದುಳಿದಿರುವ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ಸರ್ಕಾರ ಮಾಡಲಿದೆ’ ಎಂದು ಹೇಳಿದರು.

ADVERTISEMENT

ಯುವ ಕಾಂಗ್ರೆಸ್ ರಾಜ್ಯ ಘಟಕದ ಕಾರ್ಯದರ್ಶಿ ಎಚ್.ಎ. ರಂಜಿತ್, ಡಿ. ಶಿವಪ್ಪ, ಹೆಳವ ಸಮಾಜದ ಗಣೇಶ್, ಉಪ್ಪಾರ ಸಮಾಜದ ನಾಗೇಂದ್ರಪ್ಪ, ಸುಣಗಾರ್ ಸಮಾಜದ ಮಲ್ಲೇಶ್, ಭೋವಿ ಸಮಾಜದ ಶಿವಮೂರ್ತಿ, ಮಾದಿಗ ಸಮಾಜದ ತಮ್ಮಣ್ಣ, ಕುರುಬ ಸಮಾಜದ ರಾಜುಕಡಗಣ್ಣಾರ್, ತಳವಾರ ಸಮಾಜದ ಶೇಖರಪ್ಪ, ಬಣಜಾರ್ ಸಮಾಜದ ರವಿನಾಯ್ಕ, ಸಿಂಪಿಗ ಸಮಾಜದ ನಟರಾಜ್ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.