ADVERTISEMENT

ಆದಿ ಶಂಕರಾಚಾರ್ಯರ ಜಯಂತಿ ತತ್ವಜ್ಞಾನಿಗಳ ದಿನ

​ಪ್ರಜಾವಾಣಿ ವಾರ್ತೆ
Published 8 ಮೇ 2025, 15:43 IST
Last Updated 8 ಮೇ 2025, 15:43 IST
ಹೊನ್ನಾಳಿ ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಈಚೆಗೆ ಆದಿ ಶಂಕರಾಚಾರ್ಯರ ಜಯಂತಿ ಆಚರಿಸಲಾಯಿತು
ಹೊನ್ನಾಳಿ ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಈಚೆಗೆ ಆದಿ ಶಂಕರಾಚಾರ್ಯರ ಜಯಂತಿ ಆಚರಿಸಲಾಯಿತು   

ಶಕ್ತಿನಗರದಲ್ಲಿ ಮಾಕ್ ಡ್ರಿಲ್ ಇಂದು ಆದಿ ಶಂಕರಾಚಾರ್ಯರ ಜಯಂತಿ ದಿನವನ್ನು ತತ್ವಜ್ಞಾನಿಗಳ ದಿನವಾಗಿ ಕರೆಯಲಾಗುತ್ತದೆ ಎಂದು ಪುರೋಹಿತ ಕುಮಾರ್ ಭಟ್ ಕುರುವ ಹೇಳಿದರು.

ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೇರಳದ ಕಾಲಟಿಯಲ್ಲಿ ಜನಿಸಿದ ಆದಿ ಶಂಕರರು ತಮ್ಮ 32ನೇ ವರ್ಷದಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸಿ ದೇಶದಲ್ಲಿ ನಾಲ್ಕು ಪೀಠಗಳನ್ನು ಸ್ಥಾಪಿಸಿದರು. ಪೂರ್ವದಲ್ಲಿ ಗೋವರ್ಧನ ಪೀಠ (ಜಗನ್ನಾಥ ಪುರಿ), ಪಶ್ಚಿಮದಲ್ಲಿ ದ್ವಾರಕಾ ಪೀಠ, ಉತ್ತರದಲ್ಲಿ ಬದರಿನಾಥ, ದಕ್ಷಿಣದಲ್ಲಿ ಶಾರದಾ ಪೀಠಗಳನ್ನು (ಶೃಂಗೇರಿ) ಸ್ಥಾಪಿಸಿ ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿದರು. ಅವರೊಬ್ಬ ಮಹಾನ್ ದಾರ್ಶನಿಕರು’ ಎಂದರು.

ADVERTISEMENT

ಉಪವಿಭಾಗಾಧಿಕಾರಿ ವಿ. ಅಭಿಷೇಕ್, ಮುಖಂಡರಾದ ಶ್ರೀನಿವಾಸ್, ನ್ಯಾಮತಿಯ ಜಯರಾವ್, ಅಭಿರಾಮ್ ಭಟ್ ಸೇರಿದಂತೆ ಉಪವಿಭಾಗಾಧಿಕಾರಿ ಕಚೇರಿಯ ಸಿಬ್ಬಂದಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.