ಹೊನ್ನಾಳಿ: ತಾಲ್ಲೂಕಿನ ಬೇಲಿಮಲ್ಲೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಕೆ.ಎನ್. ಹನುಮಂತಪ್ಪ ಅವಿರೋಧವಾಗಿ ಆಯ್ಕೆಯಾದರು.
ನಿಕಟಪೂರ್ವ ಉಪಾಧ್ಯಕ್ಷರಾಗಿದ್ದ ಗೀತಮ್ಮ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಿತು.
ಕೆ.ಎನ್.ಹನುಮಂತಪ್ಪ ಮಾತ್ರ ಉಮೇದುವಾರಿಕೆ ಸಲ್ಲಿಸಿದ್ದರು. ಚುನಾವಣಾಧಿಕಾರಿ ಶಂಕ್ರಪ್ಪ ಹಾರಗೊಪ್ಪ ಅವರು ಅವಿರೋಧವಾಗಿ ಆಯ್ಕೆಯನ್ನು ಘೋಷಣೆ ಮಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಮಲಮ್ಮ, ಸದಸ್ಯರಾದ ಗೀತಮ್ಮ, ಮಂಜುಳಾ, ಎಂ.ಡಿ. ಸವಿತಾ, ರತ್ನಮ್ಮ, ನೀಲಮ್ಮ, ಚಂದ್ರಪ್ಪ, ಜಯಪ್ಪ, ಜಿ.ಎಸ್. ಲಕ್ಷ್ಮಿ, ಪಿ.ಬಿ. ಹನುಮಂತಪ್ಪ, ಎ.ಕೆ.ಅಣ್ಣಪ್ಪ, ಎಚ್.ನಾಗರಾಜ ನಾಯ್ಕ, ಶಾಂತಾಬಾಯಿ ಹಾಜರಿದ್ದರು.
ನೂತನ ಉಪಾಧ್ಯಕ್ಷರನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಸ್.ಸುರೇಂದ್ರ, ವಾಲ್ಮೀಕಿ ಸಮಾಜದ ಅಧ್ಯಕ್ಷ ಶಿವಾನಂದ ಮುಖಂಡರಾದ ರಾಜಪ್ಪಗೌಡ್ರು, ಪರಮೇಶಪ್ಪಗೌಡ್ರು, ಎಚ್.ವಿಶ್ವನಾಥ, ಹಿರೇಗೋಣಿಗೆರೆ ಸೋಮಣ್ಣ, ಸಿದ್ದಪ್ಪ, ಹಾಲೇಶಗೌಡ್ರು, ಪಿಡಿಒ ಪರಮೇಶ್ ಕೋಳೂರು ಹಾಗೂ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.