
ಮಲೇಕುಂಬಳೂರು: ಇಲ್ಲಿನ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ ಗುರುವಾರ ಅದ್ಧೂರಿಯಾಗಿ ನಡೆಯಿತು.
ಆಂಜನೇಯ ಸ್ವಾಮಿಯ ಮೂರ್ತಿಯನ್ನು ಹೊತ್ತ ಭಕ್ತರ ಕುಣಿತ ವೀಕ್ಷಿಸಲು ಅಪಾರ ಜನ ಸೇರಿದ್ದರು. ಚಿಕ್ಕಪಲ್ಲಕ್ಕಿಯ ಮೇಲೆ ವಿರಾಜಮಾನರಾಗಿ ಕುಳಿತಿದ್ದ ದೇವರ ಮೂರ್ತಿಯನ್ನು ಹೊತ್ತ ಭಕ್ತರು ರಥದ ಸುತ್ತು ಮೂರು ಸುತ್ತು ಸುತ್ತಿದರು. ಗ್ರಾಮದ ಹಿರಿಯರು ರಥವನ್ನು ಹಿಂದಕ್ಕೆ ಹಾಗೂ ಮುಂದಕ್ಕೆ ಮೂರು ಬಾರಿ ಎಳೆದು ಭಕ್ತರಿಗೆ ರಥವನ್ನು ಎಳೆಯಲು ಅನುವು ಮಾಡಿಕೊಟ್ಟರು. ನಂತರ ಭಕ್ತರು ತಮ್ಮ ಹರಕೆಯಂತೆ ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು.
ಮುಖಂಡರಾದ ಎನ್.ಎಚ್. ಕೃಷ್ಣಪ್ಪ, ಅಂಗಡಿ ರಾಜಣ್ಣ, ಬಿ.ಎಚ್. ವಾಗೀಶ್, ಮಾರುತಿ ಅನ್ನದಾಸೋಹ ಸಮಿತಿ ಅಧ್ಯಕ್ಷ ಕೆ.ಎಸ್. ರಂಗನಾಥಸ್ವಾಮಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಎ.ಎಸ್.ಅಣ್ಣಪ್ಪ, ಮುಖಂಡರಾದ ಸೋಮಶೇಖರ್, ಎಚ್.ಎಸ್. ಪ್ರಕಾಶ್ ಸೇರಿದಂತೆ ಪದಾಧಿಕಾರಿಗಳು, ಪುರೋಹಿತರು, ಅರ್ಚಕರು, ಭಕ್ತರು ಪಾಲ್ಗೊಂಡಿದ್ದರು.
ಮಹಾರಥೋತ್ಸವ ಇಂದು: ಫೆ.13ರಂದು ಬೆಳಗಿನ ಜಾವ 5.30ಕ್ಕೆ ಅಂಜನೇಯ ಸ್ವಾಮಿಯ ಮಹಾ ರಥೋತ್ಸವ ಜರುಗಲಿದೆ. ನಂತರ ಸಾಮೂಹಿಕ ವಿವಾಹ ಕಾರ್ಯಕ್ರಮ, ಅನ್ನ ಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.