ADVERTISEMENT

ಮಾನವೀಯ ಮೌಲ್ಯ ಬಿತ್ತಿದ ಕನಕದಾಸರು

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2019, 10:20 IST
Last Updated 2 ಡಿಸೆಂಬರ್ 2019, 10:20 IST
ದಾವಣಗೆರೆಯ ಬನ್ನಿಮಹಾಂಕಾಳಿ ದೇವಸ್ಥಾನದ ಆವರಣದಲ್ಲಿ  ಪಾಲಿಕೆ ಸಮಾಜದ ಸದಸ್ಯರಿಗೆ ಸನ್ಮಾನ ಹಾಗೂ 532ನೇ ಕನಕ ಜಯಂತ್ಯುತ್ಸವ ನಡೆಯಿತು
ದಾವಣಗೆರೆಯ ಬನ್ನಿಮಹಾಂಕಾಳಿ ದೇವಸ್ಥಾನದ ಆವರಣದಲ್ಲಿ  ಪಾಲಿಕೆ ಸಮಾಜದ ಸದಸ್ಯರಿಗೆ ಸನ್ಮಾನ ಹಾಗೂ 532ನೇ ಕನಕ ಜಯಂತ್ಯುತ್ಸವ ನಡೆಯಿತು   

ದಾವಣಗೆರೆ: 16ನೇ ಶತಮಾನದಲ್ಲಿ ಕನಕದಾಸರು ತಮ್ಮದೇ ಆದ ಸಾಹಿತ್ಯದ ಮುಖಾಂತರ ಸಮಾಜ ಹಾಗೂ ಶೋಷಿತ ಸಮುದಾಯಗಳ ಜಾಗೃತಿ ಮೂಡಿಸಿದರು ಎಂದು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಉಪನ್ಯಾಸಕ ಡಾ. ಮಂಜಣ್ಣ ಅಭಿಪ್ರಾಯಪಟ್ಟರು.

ದಾವಣಗೆರೆ ನಗರದ 33ನೇ ವಾರ್ಡಿನ ಬೀರೇಶ್ವರ ಬಡಾವಣೆ, ಕಾಳಿದಾಸ ವೃತ್ತ ಬೀರೇಶ್ವರ ಬಡಾವಣೆಯ ಬನ್ನಿಮಹಾಂಕಾಳಿ ದೇವಸ್ಥಾನದ ಆವರಣದಲ್ಲಿ ದಾವಣಗೆರೆ ಮಹಾನಗರ ಪಾಲಿಕೆಗೆ ನೂತನವಾಗಿ ಆಯ್ಕೆಯಾದ ಸಮಾಜದ ಸದಸ್ಯರಿಗೆ ಸನ್ಮಾನ ಸಮಾರಂಭ ಹಾಗೂ 532ನೇ ಕನಕ ಜಯಂತ್ಯುತ್ಸವವನ್ನು ಭಾನುವಾರ ಉದ್ಘಾಟಿಸಿ ಅವರು ಉಪನ್ಯಾಸ ನೀಡಿದರು.

ಕನಕದಾಸರಿಗೆ ಅಂದು ಸಂಕಟಗಳಿಲ್ಲದಿದ್ದರೆ ಸಂತರಾಗಲು ಸಾಧ್ಯವಾಗುತ್ತಿರಲಿಲ್ಲ. ಮೇಲ್ವರ್ಗದವರಿಂದ ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಯಿತು’ ಎಂದು ವಿಷಾದ ವ್ಯಕ್ತಪಡಿಸಿದರು.

‘ದೇಗುಲಗಳು ಸಮಾನತೆ ಜಾಗಗಳಾಗಬೇಕಾಗಿದೆ. ಸಮಾಜದ ಮುಖ್ಯವಾಹಿನಿಗೆ ನಾವೆಲ್ಲ ಬರಬೇಕು. ಸಂವಿಧಾನ ಬದಲಿಸುವ ಕಾಲಘಟ್ಟಕ್ಕೆ ಬಂದು ಶೋಷಣೆಗೊಳಗಾದ ಸಮುದಾಯಗಳನ್ನು ಹಿಂದೆ ಸರಿಸುವ ಹುನ್ನಾರ ನಡೆಯುತ್ತಿದ್ದು, ಇದರಿಂದ ಜಾಗೃತರಾಗಬೇಕಾಗಿದೆ’ ಎಂದರು.

ADVERTISEMENT

33ನೇ ವಾರ್ಡ್‌ನ ಸದಸ್ಯ ವೀರೇಶ್ ಮಾತನಾಡಿ, ‘ಈ ಭಾಗದ ಜನರಿಗೆ ಮೂಲಸೌಲಭ್ಯಗಳ ಕೊರತೆ ಇದ್ದು, ಅವುಗಳನ್ನು ಶೀಘ್ರವಾಗಿ ಬಗೆಹರಿಸುವುದಾಗಿ ಭರವಸೆ ನೀಡಿದರು. ಕಾಳಿದಾಸ ವೃತ್ತದಲ್ಲಿ ಕನಕದಾಸರ ಪುತ್ಥಳಿಗೆ ಸ್ಥಳಾವಕಾಶ ಮಾಡಿಕೊಡಲು ಈ ಸಂದರ್ಭದಲ್ಲಿ ಮನವಿ ಮಾಡಿದರು.

24ನೇ ವಾರ್ಡ್‍ನ ಪ್ರಸನ್ನಕುಮಾರ್ ಮಾತನಾಡಿ, ‘ಸಂಘಟನೆಗಳ ಮೂಲಕ ರಾಜಕೀಯ ಧ್ರುವೀಕರಣವಾಗಬೇಕಿದ್ದು, ಸಂಘಟಿತರಾದಾಗ ಮಾತ್ರ ಏನಾದರೂ ಸಾಧಿಸಲು ಸಾಧ್ಯ. ಆದ್ದರಿಂದ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕಾಗಿದೆ’ ಎಂದರು.

ಡಾ. ಉದಯ್ ಶಂಕರ್ ಒಡೆಯರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಸದಸ್ಯರಾದ ಗೀತಾ ದಿಳ್ಯೆಪ್ಪ, ಜಿ.ಡಿ. ಪ್ರಕಾಶ್, ಸುಧಾ ಇಟ್ಟಿಗುಡಿ ಮಂಜುನಾಥ್, ಆಶಾ ಉಮೇಶ್, ಕೆ. ಪ್ರಸನ್ನಕುಮಾರ್ ಹಾಗೂ ಕೆ.ಎಂ. ವೀರೇಶ್ ಅವರನ್ನು ಸನ್ಮಾನಿಸಲಾಯಿತು.

ಹದಡಿ ಬಸವರಾಜಪ್ಪ ಮಾತನಾಡಿ, ‘33ನೇ ವಾರ್ಡ್‌ನಲ್ಲಿ ಕುರುಬ ಸಮಾಜಕ್ಕೆ ಬೀರೇಶ್ವರ ದೇವಸ್ಥಾನ ಹಾಗೂ ಭವನಕ್ಕೆ ಜಾಗ ನೀಡಬೇಕು. ವಾರ್ಡ್‍ಗಳಲ್ಲಿ ರಸ್ತೆ ಮತ್ತು ತಿರುವುಗಳಿಗೆ ನಾಮಫಲಕ ಅಳವಡಿಸಬೇಕು ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ಲೋಕಿಕೆರೆ ಸಿದ್ದಪ್ಪ ಸ್ವಾಗತಿಸಿದರು. ಉಮೇಶ್ ಕಾರ್ಯಕ್ರಮ ನಿರೂಪಿಸಿದರು. ಯಲ್ಲಮ್ಮ ಶಾನವಾಡ ಪ್ರಾರ್ಥಿಸಿದರು. ಐರಣಿ ಚಂದ್ರು ಜಾಗೃತಿ ಗೀತೆಗಳನ್ನು ಹಾಡಿದರು. ಜಿ.ಎಲ್. ರೇವಣ್ಣ, ಎಂ.ಡಿ. ನೀಲಗಿರಿಯಪ್ಪ, ಹಾಲೇಕಲ್ಲು, ಎಸ್.ಟಿ. ಅರವಿಂದ್, ಪ್ರೊ. ಬಾಗೂರು ಆನಂದಪ್ಪ, ಮೈಲಾರ ಲಿಂಗಪ್ಪ, ಬಿ.ಕೆ. ಕೊಟ್ರೇಶ್, ಮಹಾತ್ಮ, ಎಂ.ಬಿ. ದ್ಯಾಮಣ್ಣ, ಬೀರಲಿಂಗಪ್ಪ, ದೊಗ್ಗಳ್ಳಿ ನಾಗಪ್ಪ, ನಾಗರಾಜಪ್ಪ, ಎನ್.ಜೆ. ರುದ್ರಪ್ಪ, ಪದ್ಮಣ್ಣ, ದಳವಾಯಿ, ಎಲ್.ಬಿ. ಭೈರೇಶ್, ಗಿರೀಶ್ ಒಡೆಯರ್, ಅಣಜಿ ಗುಡ್ಡೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.