ADVERTISEMENT

ಸಂತೇಬೆನ್ನೂರು: ಜಿ.ಪಂ. ಸಿಇಒ ಭೇಟಿ, ಮೂಲ ಸೌಕರ್ಯ ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 6:22 IST
Last Updated 4 ಡಿಸೆಂಬರ್ 2025, 6:22 IST
ಸಂತೇಬೆನ್ನೂರಿಗೆ ಬುಧವಾರ ಮುಂಜಾನೆಯೇ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತರ ಮಾಧವ ವಿಠಲರಾವ್ ಮೂಲ ಸೌಕರ್ಯಗಳ ಬಗ್ಗೆ ವೀಕ್ಷಣೆ ಮಾಡಿದರು 
ಸಂತೇಬೆನ್ನೂರಿಗೆ ಬುಧವಾರ ಮುಂಜಾನೆಯೇ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತರ ಮಾಧವ ವಿಠಲರಾವ್ ಮೂಲ ಸೌಕರ್ಯಗಳ ಬಗ್ಗೆ ವೀಕ್ಷಣೆ ಮಾಡಿದರು    

ಸಂತೇಬೆನ್ನೂರು: ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠಲ ರಾವ್ ಬುಧವಾರ ಭೇಟಿ ನೀಡಿ ಗ್ರಾಮ ಪಂಚಾಯಿತಿ ಸಿಬ್ಬಂದಿಯೊಂದಿಗೆ ಮೂಲಭೂತ ಸೌಕರ್ಯಗಳ ಪರಿವೀಕ್ಷಣೆ ಮಾಡಿದರು.

ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ಸೇವೆ ಹಾಗೂ ಸ್ವಚ್ಛತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರೈತರ ದೂರಿನನ್ವಯ ಸಾಸಲು ರಸ್ತೆ ಪಕ್ಕದಲ್ಲಿ ಸುರಿದ ಹಸಿ ಹಾಗೂ ಒಣ ಕಸದ ರಾಶಿ ವೀಕ್ಷಣೆ ನಡೆಸಿದರು.

ಕಸದ ವಿಲೇವಾರಿಗೆ ವೈಜ್ಞಾನಿಕ ಕ್ರಮ ಜರುಗಿಸಲು ಅಧಿಕಾರಿಗಳಿಗೆ ತಾಕೀತು ಮಾಡಿದರು. ಕಸ ಎಸೆಯುವವರಿಗೆ ₹ 5,000 ದಂಡ ವಿಧಿಸಲು ಸೂಚಿಸಿದರು. ಚರಂಡಿ ನೀರು ನೇರವಾಗಿ ಕೆರೆ ಸೇರುವ ಸ್ಥಳ ವೀಕ್ಷಿಸಿದರು.

ADVERTISEMENT

ಉದ್ಯೋಗ ಖಾತ್ರಿ ಯೋಜನೆಯಲ್ಲಿ ತಡೆಗೋಡೆ ನಿರ್ಮಿಸಬೇಕು. ಅದಕ್ಕಾಗಿ ಪೂರ್ಣ ಪ್ರಮಾಣದ ಯೋಜನೆ ರೂಪಿಸಲು ಹೇಳಿದರು. ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ತ್ಯಾಜ್ಯ ಸಂಗ್ರಹವನ್ನು ವಿಲೇವಾರಿ ಮಾಡಲು ಸೂಚಿಸಿದರು.

ಗ್ರಾಮದಲ್ಲಿ ಅರ್ಧಭಾಗಕ್ಕೆ ಸೂಳೆಕೆರೆ ನೀರು ಯೋಜನೆಯಿಂದ ನೀರು ಬಿಡಲಾಗುತ್ತಿದೆ. ಗ್ರಾಮದ ವ್ಯಾಪ್ತಿಯಲ್ಲಿ ಸಂಪೂರ್ಣ ಸೂಳೆಕೆರೆ ನೀರು ಪೂರೈಸಲು, ಒಳ ಚರಂಡಿ ವ್ಯವಸ್ಥೆ ನಿರ್ಮಿಸಲು ಶಾಸಕರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಇಒ ಪ್ರಕಾಶ್, ಎಇಇ ಲೋಹಿತ್, ಎಇ ಗಿರೀಶ್, ಭಾನುಪ್ರಕಾಶ್, ಪಿಡಿಒ ಉಮೇಶ್, ಕಾರ್ಯದರ್ಶಿ ನಾಗರಾಜ್, ಕೆ.ಬಸವರಾಜ್, ರವಿಕುಮಾರ್, ಸದಸ್ಯರಾದ ರಹಮತ್ ಉಲ್ಲಾ, ಅಮ್ಜದ್, ಗಿರೀಶ್, ರಾಮಪ್ಪ, ಆಸೀಫ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.