ADVERTISEMENT

ದಾವಣಗೆರೆ: ನೀರಲ್ಲಿ ಯೋಗ ಪ್ರದರ್ಶಿಸಿದ ಪುಟ್ಟ ಮಗು, 80ರ ವೃದ್ಧೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2022, 1:57 IST
Last Updated 22 ಜೂನ್ 2022, 1:57 IST
ಮೂರು ವರ್ಷ 9 ತಿಂಗಳ ಮಗು, 80 ವರ್ಷದ ವೃದ್ಧೆ ಸಹಿತ 24 ಯೋಗಪಟುಗಳು ದಾವಣಗೆರೆ ಆಫೀಸರ್ಸ್‌ ಕ್ಲಬ್‌ನ ಈಜುಕೊಳದಲ್ಲಿ ಮಂಗಳವಾರ ಜಲಯೋಗ ಪ್ರದರ್ಶಿಸಿದರು.
ಮೂರು ವರ್ಷ 9 ತಿಂಗಳ ಮಗು, 80 ವರ್ಷದ ವೃದ್ಧೆ ಸಹಿತ 24 ಯೋಗಪಟುಗಳು ದಾವಣಗೆರೆ ಆಫೀಸರ್ಸ್‌ ಕ್ಲಬ್‌ನ ಈಜುಕೊಳದಲ್ಲಿ ಮಂಗಳವಾರ ಜಲಯೋಗ ಪ್ರದರ್ಶಿಸಿದರು.   

ದಾವಣಗೆರೆ: ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಮೂರು ವರ್ಷ 9 ತಿಂಗಳ ಮಗು, 80 ವರ್ಷದ ವೃದ್ಧೆ ಸಹಿತ 24 ಯೋಗಪಟುಗಳು ದಾವಣಗೆರೆ ಆಫೀಸರ್ಸ್‌ ಕ್ಲಬ್‌ನ ಈಜುಕೊಳದಲ್ಲಿ ಜಲಯೋಗ ಪ್ರದರ್ಶಿಸಿದರು.

ಶಿವಮೊಗ್ಗ ಜಿಲ್ಲೆಯ ಸಾಗರದ ಹರೀಶ್ ಡಿ. ನವಾತೆ ನೇತೃತ್ವದಲ್ಲಿಜಲಯೋಗ ಪ್ರದರ್ಶನ ನಡೆಯಿತು. ಭೀಮನಕೋಣೆ ಹಾಗೂ ಸಾಗರ ತಾಲ್ಲೂಕಿನ ಇತರೆ ಹಳ್ಳಿಗಳ ಯೋಗಪಟುಗಳು ಭಾಗವಹಿಸಿದ್ದರು.

ಸಿಗಂದೂರು ಹೊಳೆಬಾಗಿಲಿನ ಹಿನ್ನೀರಿನಲ್ಲಿ ಈಜಿ ದಾಖಲೆ ಬರೆದಿರುವ 3 ವರ್ಷ 9 ತಿಂಗಳ ಪುಟಾಣಿ ಮಿಥಿಲಾ ಹಾಗೂ 80 ವರ್ಷದ ವೃದ್ಧೆ ಇಂದಿರಾ ಅವರು ಭಾಗವಹಿಸಿ ಬೆರಗು ಮೂಡಿಸಿದರು.

ಜಲಯೋಗ ಕಲಿತರೆ ನೀರಿನಲ್ಲಿ ಮುಳುಗಿದ ವ್ಯಕ್ತಿ ಸಾವಿನಿಂದ ಪಾರಾಗಬಹುದು. ಗ್ರಾಮೀಣ ಭಾಗಗಳಲ್ಲಿ ಹಲವು ಮಂದಿ ಈಜು ಬಾರದೇ ನೀರಿಗಳಿದು ಸಾವನ್ನಪ್ಪುತ್ತಿದ್ದಾರೆ. ಅವರನ್ನು ರಕ್ಷಿಸಲು ತರಬೇತಿ ಅಗತ್ಯ. ಎನ್‌ಡಿಆರ್‌ಎಫ್‌ನಂತೆ ವಿಡಿಆರ್‌ಎಫ್ (ವಿಲೇಜ್ ಡಿಸಾಸ್ಟರ್ ರೆಸ್ಕ್ಯೂ ಫೋರ್ಸ್) ರಚನೆಯಾಗಬೇಕು. ಹಾಗೆಯೇ ಜಲಯೋಗ ದಿನವನ್ನು ಘೋಷಿಸಬೇಕು ಎಂದುಹರೀಶ್ ಡಿ. ನವಾತೆ ಆಗ್ರಹಿಸಿದರು.

ಮಹಿಳೆಯರ ಸಬಲೀಕರಣ, ಪರಿಸರ ಮತ್ತು ಜಲಯೋಗದ ಬಗ್ಗೆ ಮಮತಾ ಅವರು ತಿಳಿಸಿಕೊಟ್ಟರು. ವಿಧಾನಪರಿಷತ್‌ ಸದಸ್ಯೆ ತೇಜಸ್ವಿನಿ ಗೌಡ, ಕಂದಾಯ ಉಪವಿಭಾಗಾಧಿಕಾರಿ ದುರ್ಗಾಶ್ರೀ, ವಾಸುದೇವ ರಾಯ್ಕರ್‌ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.