ADVERTISEMENT

ಆರೋಗ್ಯ ಸಂವೃದ್ಧಿಗೆ ಅಯೋಡಿನ್ ಅಗತ್ಯ: ಡಾ. ಸುಧಾ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 5:51 IST
Last Updated 1 ಡಿಸೆಂಬರ್ 2021, 5:51 IST
ಮೊಳಕಾಲ್ಮುರಿನಲ್ಲಿ ಮಂಗಳವಾರ ವಿಶ್ವ ಅಯೋಡಿನ್ ನಿಯಂತ್ರಣ ಸಪ್ತಾಹವನ್ನು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸುಧಾ ಉದ್ಘಾಟಿಸಿದರು.
ಮೊಳಕಾಲ್ಮುರಿನಲ್ಲಿ ಮಂಗಳವಾರ ವಿಶ್ವ ಅಯೋಡಿನ್ ನಿಯಂತ್ರಣ ಸಪ್ತಾಹವನ್ನು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸುಧಾ ಉದ್ಘಾಟಿಸಿದರು.   

ಮೊಳಕಾಲ್ಮುರು: ಪ್ರಕೃತಿ ದತ್ತವಾಗಿ ಸಿಗುವ ಹಣ್ಣು, ತರಕಾರಿಗಳನ್ನು ನಿಯಮಿತವಾಗಿ ಸೇವಿಸುವ ಮೂಲಕ ದೇಹಕ್ಕೆ ಅಗತ್ಯವಿರುವ ಅಯೋಡಿನ್ ಪಡೆದುಕೊಳ್ಳಲು ಸಾಧ್ಯ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಸುಧಾ ಹೇಳಿದರು.

ಸಾರ್ವಜನಿಕ ಆಸ್ಪತ್ರೆಯಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಆರೋಗ್ಯಾಧಿಕಾರಿಗಳ ಕಚೇರಿ ಮತ್ತು ಶಿಶು ಅಭಿವೃದ್ಧಿ ಇಲಾಖೆ ಹಮ್ಮಿಕೊಂಡಿದ್ದ ವಿಶ್ವ ಅಯೋಡಿನ್ ನಿಯಂತ್ರಣ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.

ಗರ್ಭಿಣಿಯರಿಗೆ 200-290 ಎಂಜಿ, ಮಕ್ಕಳಿಗೆ 50-90 ಎಂಜಿ ಅಯೋಡಿನ್ ಅಗತ್ಯವಿದೆ. ಇದರ ಕೊರತೆಯಾದಲ್ಲಿ ಗಂಟಲು ಬೇನೆ, ಪದೇ, ಪದೇ ಗರ್ಭಪಾತ, ನಿಶ್ಯಕ್ತಿ ಹಾಗೂ ಆಂಗವಿಕಲ ಮಕ್ಕಳ ಜನನ, ದೈಹಿಕ ಮತ್ತು ಮಾನಸಿಕ ಕುಂಠಿತ ಮಗುವಿನ ಜನನ ಸಮಸ್ಯೆ ಕಂಡುಬರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಅಯೋಡಿನ್ ಸಮತೋಲನೆಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರಿ ಸವಿತಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಾನಕಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಗುರುಮೂರ್ತಿ, ಸಂರಕ್ಷಣಾಧಿಕಾರಿ ವಿಶಾಲಾಕ್ಷಿ, ಬಿಪಿಎಂ ನವೀನ್, ಸುರಕ್ಷಣಾಧಿಕಾರಿ ರೂಪ, ನಾಗವೇಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.